ದಾವಣಗೆರೆ: ಗೂಗಲ್ ರೇಟಿಂಗ್ ನೀಡಿದ್ರೆ ಹಣ ಕೊಡುವುದಾಗಿ ನಂಬಿಸಿ ಶಿಕ್ಷಕಿಗೆ 8 ಲಕ್ಷ ವಂಚನೆ ನಡೆಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ನಿಜಲಿಂಗಪ್ಪ ಬಡಾವಣೆಯ ಶಿಕ್ಷಕಿಯೊಬ್ಬರು 8.11 ಲಕ್ಷ ರೂ.ಕಳೆದುಕೊಂಡಿದ್ದಾರೆ. ಜುಲೈ 2 ರಂದು ಶಿಕ್ಷಕಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಬಂದ ವಾಟ್ಸಾಪ್ ಸಂದೇಶದಲ್ಲಿ ಗೂಗಲ್‌ನಲ್ಲಿ ಸ್ಟಾರ್ ರೇಟಿಂಗ್‌ಗಳನ್ನು ನೀಡಿದರೆ ಹಣ ಗಳಿಸಬಹುದು ಎಂದು ಹೇಳಲಾಗಿತ್ತು.
ಇದನ್ನು ನಂಬಿ ಒಟ್ಟು 8.11 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ನಂತರ ಲಾಭಾಂಶ ಸಹಿತ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ, ವಂಚಕರು ಟಾಸ್ಕ್ ಪೂರ್ಣಗೊಳಿಸಿಲ್ಲ ಎಂದು ಹೇಳಿ ಹಣ ನೀಡಲು ನಿರಾಕರಿಸಿದ್ದಾರೆ. ಇದರಿಂದ ಅನುಮಾನಗೊಂಡ ಶಿಕ್ಷಕಿಗೆ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.