ದಾವಣಗೆರೆ: ಗಂಡ- ಹೆಂಡ್ತಿ ನಡುವೆ ಜಗಳದಲ್ಲಿ ಪತ್ನಿ ಮೂಗನ್ನೇ ಪತಿರಾಯ ಬಾಯಿಂದ ಕಚ್ಚಿ ತುಂಡರಿಸಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ನಡೆದಿದೆ.
ಭದ್ರಾ ಜಲಾಶಯ; ಭರ್ತಿಗೆ ಕೇವಲ 11.8 ಅಡಿ ಬಾಕಿ; ಜು.11ರ ನೀರಿನ ಮಟ್ಟ ಎಷ್ಟಿದೆ..?
ಚನ್ನಗಿರಿ ತಾಲೂಕಿನ ಮಂಟರಘಟ್ಟ ಗ್ರಾಮದ ದಂಪತಿಯ ನಡುವೆ ಗಲಾಟೆ ನಡೆದಿದೆ. ಗ್ರಾಮದ ವಿಜಯ್ ಎಂಬಾತ ಕೃತ್ಯ ನಡೆಸಿದ್ದಾನೆ. ಸಾಲದ ವಿಚಾರಕ್ಕೆ ನಡೆದ ಜಗಳದಲ್ಲಿ ಪತ್ನಿ ವಿದ್ಯಾ (30) ಮೂಗು ತುಂಡಾಗುವಂತೆ ಕಚ್ವಿದ್ದಾನೆ. ತೀವ್ರವಾಗಿ ಯಗೊಂಡಿದ್ದ ವಿದ್ಯಾಳನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಬಳಿಕ ಶಿವಮೊಗ್ಗಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಡ ವಿಜಯ್ ವಿರುದ್ಧವೇ ಪತ್ನಿ ವಿದ್ಯಾ ಠಾಣೆ ಮೆಟ್ಟಿಲೇರಿದ್ದಾರೆ.
ದಾವಣಗೆರೆ: ಚಲಿಸುವ ರೈಲಿಗೆ ತಲೆಕೊಟ್ಟು ತಾಯಿ-ಮಗಳು ಆತ್ಮಹ*ತ್ಯೆ
ಸಾಲದ ಕಂತು ಕಟ್ಟುವ ವಿಚಾರವಾಗಿ ಜಗಳ
ಸಾಲದ ಕಂತು ಕಟ್ಟುವ ವಿಚಾರಕ್ಕೆ ದಂಪತಿಯ ನಡುವೆ ಜು.8ರಂದು ಜಗಳ ನಡೆದಿತ್ತು.ಜಗಳ ವಿಕೋಪಕ್ಕೆ ಹೋಗಿ ವಿಜಯ್ ಪತ್ನಿ ವಿದ್ಯಾಗೆ ಮೇಲೆ ಹಲ್ಲೆ ನಡೆಸಿ ಮೂಗು ಕಚ್ಚಿ ತುಂಡರಿಸಿದ್ದನು. ಸ್ಥಳೀಯರು ಜಗಳ ಬಿಡಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಚನ್ನಗಿರಿಗೆ ಕೇಸ್ ವರ್ಗಾವಣೆ
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗದ ಜಯನಗರ ಠಾಣೆಯಲ್ಲಿ ಮೆಡಿಕಲ್ ಲೀಗಲ್ ಕೇಸ್ ದಾಖಲಾಗಿದ್ದು, ಬಳಿಕ ಜಯನಗರ ಠಾಣೆಯಿಂದ ಚನ್ನಗಿರಿ ಪೊಲೀಸ್ ಠಾಣೆಗೆ ಕೇಸ್ ವರ್ಗಾವಣೆ ಮಾಡಲಾಗಿದೆ.



