ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕುಣೆಬೆಳಕೆರೆ ಗ್ರಾಮದ ಮನೆಯೊಂದರ ಬೀಗ ಮುರಿದು ಕಳವು ಪ್ರಕರಣಕ್ಕೆ ಸಬಂಧಿಸಿದಂತೆ ಅದೇ ಗ್ರಾಮದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಚಿನ್ನ, ನಗದು ವಶಕ್ಕೆ ಪಡೆದಿದ್ದಾರೆ.
ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕುಣೆಬೆಳಕೆರೆ ಗ್ರಾಮದಲ್ಲಿ 20/12/2024 ರಂದು ರಾತ್ರಿ ಸಮಯದಲ್ಲಿ ಮನೆಯ ಬೀಗವನ್ನು ಹೊಡೆದು 1) 1,90,000/- ರೂ ನಗದು ಹಣ ಮತ್ತು 1,10,000/- ರೂ ಬೆಲೆಯ ಚಿನ್ನಾಭರಣ ಕಳ್ಳತನವಾಗಿದ್ದು, ಈ ಬಗ್ಗೆ ಗ್ರಾಮದ ಉಮಾ ದೂರು ನೀಡಿದ್ದರು.
ಈ ಪ್ರಕರಣದ ಆರೋಪಿ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ್ ಎಂ ಸಂತೋಷ, ಮತ್ತು ಜಿ. ಮಂಜುನಾಥ ಹಾಗೂ ಡಿವೈಎಸ್ಪಿ ಬಸವರಾಜ್ ಬಿ.ಎಸ್ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ಮತ್ತು ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿತ್ತು.
ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ತನಿಖೆ ಕೈಗೊಂಡು ದಿನಾಂಕ: 23/04/2025 ರಂದು ಪ್ರಕರಣದ ಆರೋಪಿ ಎಂ.ಎಸ್ ಚಿಕ್ಕಪ್ಪ (25) ಪ್ಲಂಬರ್ ಕೆಲಸ, ವಾಸ: ಕುಣೆಬೆಳಕೆರೆ ಗ್ರಾಮ, ಹರಿಹರ ತಾಲ್ಲೂಕು ಈತನನ್ನು ಬಂಧನ ಮಾಡಲಾಗಿದೆ.
ಆರೋಪಿ ಕಳುವು ಮಾಡಿದ್ದ 1) 1,90,000/- ರೂ ನಗದು ಹಣ ಮತ್ತು 1,10,000/- ರೂ ಬೆಲೆಯ 2) 07 ಗ್ರಾಂ 400 ಮಿಲಿ ತೂಕದ ಒಂದು ಜೊತೆ ಬಂಗಾರದ ಬೆಂಡೋಲೆ, 3) 03 ಗ್ರಾಂ 900 ಮಿಲಿ ತೂಕದ ಒಂದು ಜೊತೆ ಬಗಾರದ ಕಿವಿ ರಿಂಗ್ 4) 01 ಗ್ರಾಂ 360 ಮಿಲಿ ತೂಕದ ಬಂಗಾರದ 01 ಜೊತೆ ಕಿವಿ ಡ್ರಾಪ್ಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಶ್ಲಾಘಿಸಿದ್ದಾರೆ.