ದಾವಣಗೆರೆ: ವಕ್ಫ್ ಮಸೂದೆ ಕುರಿತು ಪ್ರಚೋದನಾತ್ಮಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ವ್ಯಕ್ತಿ ವಿರುದ್ಧ ಜಿಲ್ಲಾ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಇತ್ತೀಚಿಗೆ ಲೋಕಸಭೆ ಮತ್ತು ರಾಜ್ಯ ಸಭೆಯಲ್ಲಿ ವಕ್ಫ್ ಮಸೂದೆ -2025 ಬಿಲ್ ಜಾರಿಯಾಗಿದ್ದು, ಈ ಹಿನ್ನಲೆಯಲ್ಲಿ ವಕ್ಫ್ -2025 ರ ವಿರುದ್ಧವಾಗಿ ದಿನಾಂಕ: 08/04/2025 ರಂದು ಬೆಳಗಿನ ಜಾವ ಅವಧಿಯಲ್ಲಿ ದಾವಣಗೆರೆ ಮಹಾನಗರ ಪಾಲಿಕೆ 4ನೇ ವಾರ್ಡ್ ನ ಮಾಜಿ ಸದಸ್ಯ ಅಹಮ್ಮದ್ ಕಬೀರ್ ಖಾನ್ ವಾಸ: ಅಹ್ಮದ್ ನಗರ, ದಾವಣಗೆರೆ.ಈತ ಎಲ್ಲಿಯೋ ಕುಳಿತುಕೊಂಡು ಎಲ್ಲಾ ಊರುಗಳಲ್ಲಿ ಈ ಬಿಲ್ ನ್ನು ರದ್ದುಪಡಿಸುವ ಕುರಿತು ಪ್ರೋಟೆಸ್ಟ್ ಮಾಡುತ್ತಾ ಇದ್ದಾರೆ. ಇದಕ್ಕೆ ನನ್ನಿಂದ ಒಂದು ಮಾತನ್ನು ಹೇಳ ಬಯಸುತ್ತೇನೆ. ಪ್ರೋಟೆಸ್ಟ್ ಮಾಡುವುದರಿಂದ, ಕಟೌಟರ್ ಹಿಡಿಯುವುದರಿಂದ ಡಿಸಿ ಸಾಹೇಬರಿಗೆ, ಸಿಎಂ ಅವರಿಗೆ ಲೆಟರ್ ಕೊಡುವುದರಿಂದ ಪದಾಧಿಕಾರಿಗಳಿಗೆ ಕೊಡುವುದರಿಂದ ಏನು ಲಾಭ ಇಲ್ಲ. ರೋಡಿಗೆ ಇಳಿಯುವುದು ಅವಶ್ಯಕವಾಗಿದೆ.
ಏನು..? ಮಾಡಬೇಕು ಅಂತ ಇದ್ದೀರ ನೀವುಗಳು ಕೂಡಿ ಮಾತನಾಡಿಕೊಂಡು ಮಾಡಿ, ಈ ಕಾಯ್ದೆಯನ್ನು ಅಷ್ಟು ಸುಲಭವಾಗಿ ರದ್ದು ಮಾಡುವುದಿಲ್ಲ ಅದಕ್ಕೊಸ್ಕರ ತ್ಯಾಗ, ಬಲಿದಾನ ಕೊಡಬೇಕಾಗುತ್ತೇ ಪೋಸ್ಟರ್, ಕಟೌಟರ್ ಇದರಿಂದ ಏನು ಆಗುವುದಿಲ್ಲ ರಸ್ತೆಗೆ ಇಳಿಯಬೇಕ. ಏನು ಬೇಕಾದರೂ ಮಾಡಿ ಎಂದು ಇತರೆ ವಿಷಯಗಳನ್ನು ಪ್ರಸ್ತಾಪಿಸಿ ಎಂದು ಸಾರ್ವಜನಿಕರನ್ನು ಪ್ರಚೋದಿಸಿದ್ದಾನೆ.
ಒಂದು ಸಮಾಜದ ಭಾವನೆಗಳನ್ನು ಕೆರಳಿಸುವ ಮತ್ತು ಮತ್ತೊಂದು ಸಮಾಜದ ಜನರನ್ನು ಉತ್ತೇಜಿಸಿ ಸಮಾಜದಲ್ಲಿ ಆಶಾಂತಿಯನ್ನುಂಟು ಮಾಡಿ ಹಿಂಸೆ, ವೈರತ್ವ, ದ್ವೇಷ, ವೈಮನಸ್ಸು ಉಂಟು ಮಾಡುವಂತೆ, ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತೆ ಪ್ರಚೋಧನೆ ಮಾಡುವಂತಹ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಸದರಿ ವಿಡಿಯೋ ಪರಿಶೀಲಿಸಿದ್ದು, ಸದರಿ ಸಂಬಂಧ ಅಹಮ್ಮದ್ ಕಬೀರ್ ಖಾನ್ ಮತ್ತು ಇತರೆಯವರ ವಿರುದ್ಧ ಸ್ವದೂರಿನ ಮೆರೆಗೆ ಠಾಣಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
ಸಾರ್ವಜನಿಕರ ಗಮನಕ್ಕೆ: ದಾವಣಗೆರೆ ಜಿಲ್ಲೆಯ ಸಾರ್ವಜನಿಕರ ಗಮನಕ್ಕೆ ತರಬಯಸುವುದೇನೆನಂದರೆ, ವಾಟ್ಸ್ಆಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ಗಳು ವಿಶೇಷವಾಗಿ ವಕ್ಷ್ ಬಿಲ್ ಸಂಬಂಧಿಸಿದಂತೆ ಹಾಗೂ ಇತ್ಯಾದಿ ಅಕ್ಷೇಪರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಮತ್ತು ಶೇರ್ ಮಾಡುವುದು ಕಾನೂನಿಗೆ ಬಾಹಿರವಾಗಿದ್ದು, ಅಂತ ಪೋಸ್ಟ್ಗಳನ್ನು ಮಾಡುವಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.