ದಾವಣಗೆರೆ: ಇಬ್ಬರು ಬಾಲಕರನ್ನು ಅಡಿಕೆ ಮರಕ್ಕೆ ಕಟ್ಟಿ ಹಲ್ಲೆ ಮಾಡಿ, ಬಟ್ಟೆ ಬಿಚ್ವಿ ಕೆಂಪು ಇರುವೆ (ಕೆಂಜಿಗ) ಬಿಟ್ಟು ಚಿತ್ರಹಿಂಸೆ ನೀಡಿರುವ ಅಮಾನವೀಯ ಘಟನೆ ಜಿಲ್ಲೆಯ ಚನ್ನಗಿರಿ (Channagiri) ತಾಲೂಕಿನ ನಲ್ಲೂರ ಸಮೀಪದ ಅಸ್ತಾಪನಹಳ್ಳಿಯಲ್ಲಿ ನಡೆದಿದೆ. ಈ ಸಬಂಧ 9 ಜನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ದಾವಣಗೆರೆ: ಅಡಿಕೆಗೆ ಭರ್ಜರಿ ಬೆಲೆ; 55 ಸಾವಿರ ಗಡಿಯತ್ತ ದರ; ಕನಿಷ್ಠ, ಗರಿಷ್ಠ ರೇಟ್ ಎಷ್ಟಿದೆ..?
ಚಿತ್ರಹಿಂಸೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುದ್ದು, ಇದನ್ನು ಗಮನಿಸಿದ ಪೊಲೀಸರು 9 ಯುವಕ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ಪ್ರಕರಣದಲ್ಲಿ ಸುಭಾಷ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆದಿದೆ.
ಕಾಲೇಜು ಶಿಕ್ಷಣ ಇಲಾಖೆ: ಹೊರಗುತ್ತಿಗೆ ಆಧಾರದ ಮೇಲೆ 1000 ಗ್ರೂಪ್-ಡಿ ಸಿಬ್ಬಂದಿ ನೇಮಕಕ್ಕೆ ಟೆಂಡರ್
ಅಸ್ತಾಪನಹಳ್ಳಿ ಗ್ರಾಮದ ದರ್ಶನ ಎಂಬುವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿ ಪರಾರಿಯಾಗಿದ್ದರು. ಬಳಿಕ ಬಾಲಕನನ್ನು ಹಿಡಿದು ಅಡಕೆ ತೋಟಕ್ಕೆ ಕರೆದೊಯ್ದು ಹಲ್ಲೆ ಮಾಡಲಾಗಿದೆ. ಕಳ್ಳತನಕ್ಕೆ ಸಹಕರಿಸಿದ್ದ ಇನ್ನೊಬ್ಬ ಬಾಲಕನಿಗೂ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹಲ್ಲೆಗೊಳಗಾದ ಬಾಲಕನ ಅಜ್ಜ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ 9 ಯುವಕರ ವಿರುದ್ಧ FIR ದಾಖಲಾಗಿದೆ.
ಹಲ್ಲೆ ಮಾಡಿದವರಲ್ಲಿ ನಾಲ್ವರು ಅಪ್ರಾಪ್ತರು. ಉಳಿದ ಸುಭಾಷ್ (23), ಲಕ್ಕಿ(21), ದರ್ಶನ್ (22), ಪರಶು (25), ಶಿವದರ್ಶನ್ (23), ಹರೀಶ್ (25), ಪಟ್ಟಿ ರಾಜು(20), ಭೂಣಿ (18), ಸುಧನ್ ಅಲಿಯಾಸ್ ಮಧುಸೂಧನ್ ವಿರುದ್ದ ಕೇಸ್ ದಾಖಲಾಗಿದೆ.
ತೋಟವೊಂದರಲ್ಲಿ ನಡೆದಿರುವ ಈ ಘಟನೆಯಲ್ಲಿ ಸುಮಾರು 10-15 ಯುವಕರು ಬಾಲಕನಿಗೆ ದೊಣ್ಣೆ, ಡ್ರಿಪ್ ಪೈಪ್ ಅಲ್ಲದೇ ಸಿಕ್ಕ ಸಿಕ್ಕ ವಸ್ತುಗಳಿಂದ ಥಳಿಸಿದ್ದಾರೆ. ಬಳಿಕ ಅವನನ್ನು ಬೆತ್ತಲೆಗೊಳಿಸಿ ಅಡಿಕೆ ಮರಕ್ಕೆ ಕಟ್ಟಿಹಾಕಿದ್ದಾರೆ. ಈ ವೇಳೆ ಬಾಲಕ ಪ್ರಾಣಭಯದಿಂದ ಚೀರಾಡುತ್ತಿದ್ದರೂ ಸಹ ಬಿಡದೆ ಆತನ ಮೇಲೆ ಕೆಂಪಿರುವೆ ಬಿಟ್ಟು ವಿಕೃತಿ ಮೆರೆಯಲಾಗಿದೆ.
ಹಕ್ಕಿಪಿಕ್ಕಿ ಜನಾಂಗ ಗಿಡಮೂಲಿಕೆ ಮಾರಿ ಜೀವನ ನಡೆಸುತ್ತಿದ್ದ ಈ ಬಾಲಕನ ಕುಟುಂಬಸ್ಥರು ಹಾಗೂ ಪೋಷಕರು ವಿದೇಶಕ್ಕೆ ತೆರಳಿದ್ದಾರೆನ್ನಲಾಗಿದ್ದು, ಈ ಬಾಲಕ ಪದೇ ಪದೇ ಕಳವು ನಡೆಸುತ್ತಿದ್ದ ಎಂದು ಆರೋಪಿಸಲಾಗಿತ್ತು. ಹೀಗಾಗಿ ಹಕ್ಕಿಪಿಕ್ಕಿ ಜನಾಂಗದ ಯುವಕರು ಬಾಲಕನಿಗೆ ಪಾಠ ಕಲಿಸಲು ಈ ರೀತಿಯ ಕುಕೃತ್ಯ ಎಸೆಗೆದ್ದಾರೆನ್ನಲಾಗಿದೆ.