ದಾವಣಗೆರೆ: ಮನೆಕಳ್ಳತನ ಪ್ರಕರಣ ದಾಖಲಾಗಿ 48 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಯಿಂದ 5.50 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.
ದಿನಾಂಕ 17-03-2025 ರಂದು ಬೆಳಿಗ್ಗೆ ಸಮಯದಲ್ಲಿ ಹೊನ್ನಾಳಿ ಪಟ್ಟಣದ ಸರ್ವರ್ ಕೇರಿಯ ಸಾಗರೀಕ (29) ಉಪನ್ಯಾಸಕಿ ಮನೆಗೆ ಯಾರೋ ಕಳ್ಳರು ನುಗ್ಗಿ, ಮನೆ ಹೆಂಚು ತೆಗೆದು ಒಳಪ್ರವೇಶಿಸಿ ಮನೆಯ ಕಳ್ಳತನ ಮಾಡಿದ್ದರು. ರೂಂನ ಕಬೊರ್ಡನಲ್ಲಿಟ್ಟಿದ್ದ 1) 60 ಗ್ರಾಂ ತೂಕದ ಬಂಗಾರದ ತಾಳಿ ಸರ, 2) 17 ಗ್ರಾಂ ತೂಕದ ಬಂಗಾರದ ಬ್ರೇಸ್ ಲೈಟ್, 3) 7 ಗ್ರಾಂ ತೂಕದ ಮುತ್ತುಳ್ಳಾ ಬಂಗಾರದ ಚೈನ್ ಸರ, 4) 8 ಗ್ರಾಂ ತೂಕದ ಬಂಗಾರದ 02 ಉಂಗುರ, 5) 17 ಗ್ರಾಂ ತೂಕದ ಬಂಗಾರದ 06 ಜೋತೆ ಕಿವಿಯೋಲೆ, 25 ಗ್ರಾಂ ತೂಕದ ಬೆಳ್ಳಿಯ ಕಾಲ್ ಚೈನ್ ಒಟ್ಟು 109 ಗ್ರಾಂ ತೂಕದ ಬಂಗಾರದ ವಡವೆಗಳು, ಮತ್ತು 25 ಗ್ರಾಂ ತೂಕದ ಬೆಳ್ಳಿಯ ಕಾಲ್ ಚೈನ್ ಕಳ್ಳತನವಾಗಿರುವ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣದ ಆರೋಪಿತರು ಮತ್ತು ಮಾಲು ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ ಐ.ಪಿ.ಎಸ್ ಹಾಗೂ ಎಎಸ್ಪಿ ವಿಜಯಕುಮಾರ ಸಂತೋಷ ಹಾಗೂ ಶ್ರೀ ಜಿ.ಮಂಜುನಾಥ ರವರ ಹಾಗೂ ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಸುನೀಲ್ ಕುಮಾರ ಹೆಚ್ ರವರ ಹಾಗೂ ಸಿಬ್ಬಂದಿಗಳನ್ನೊಳಗೊಂಡ ಪೊಲೀಸ್ ತಂಡ ರಚಿಸಲಾಗಿತ್ತು. ಪ್ರಕರಣದ ಆರೋಪಿ ಶಿವರಾಜ.ಪಿ.ಎಸ್@ಶೀವು (35) ವಾಸ;- ಚುರ್ಚುಗುಂಡಿ ಗ್ರಾಮ, ಶಿಕಾರಿಪುರ ತಾಲ್ಲೂಕ, ಶಿವಮೊಗ್ಗ ಜಿಲ್ಲೆ. ಈತನನ್ನು ದಿನಾಂಕ;-19-03-2025 ರಂದು ಪತ್ತೆ ಮಾಡಿ, ಆರೋಪಿಯಿಂದ ಕಳವು ಮಾಡಿದ ಒಟ್ಟು 5,50.000 ರೂ ಮೌಲ್ಯದ 109 ಗ್ರಾಂ ತೂಕದ ಬಂಗಾರದ ವಡವೆಗಳು ಹಾಗೂ ಬೆಳ್ಳಿಯ ಆಭರ ವಶಪಡಿಸಿಕೊಳ್ಳಲಾಗಿದೆ.
ಆರೋಪಿತ ಹಿನ್ನೆಲೆ: ಪ್ರಕರಣದ ಆರೋಪಿ ಶಿವರಾಜ.ಪಿ.ಎಸ್@ಶೀವು ಈತನ ವಿರುದ್ಧ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಕಳ್ಳತನ ಪ್ರಕರಣಗಳು ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿ ಇರುತ್ತವೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.