ದಾವಣಗೆರೆ: ಮದುವೆ ದಿನವೇ ಮದುಮಗನ ಮನೆಯಲ್ಲಿ ಕಳ್ಳತನವಾಗಿದೆ. ಮನೆವರೆಲ್ಲರೂ ಮದುವೆಗೆ ಹೋಗಿ ಬರುವಷ್ಟರಲ್ಲಿ ಮನೆ ಬೀಗ ಮುರಿದು ಚಿನ್ನಾಭರಣ, 4.5 ಲಕ್ಷ ನಗದು ದೋಚಿ ಪರಾರಿಯಾದ ಘಟನೆಯಾದ ಘಟನೆ ದಾವಣಗೆರೆ ಹೊರ ವಲಯದ ಎಲೆಬೇತೂರು ಗ್ರಾಮದಲ್ಲಿ ನಡೆದಿದೆ.
ದಾವಣಗೆರೆ: ಹಾಫ್ ಹೆಲ್ಮೆಟ್ ತೆರವು ವಿಶೇಷ ಕಾರ್ಯಾಚರಣೆ; 2 ಸಾವಿರ ಹಾಫ್ ಹೆಲ್ಮೆಟ್ ವಶ- ಸೋಮವಾರದಿಂದ ದಂಡ ಫಿಕ್ಸ್
ಕುಟುಂಬ ಸಮೇತ ಎಲೆಬೇತೂರು ಗ್ರಾಮದ ಕಲ್ಯಾಣ ಮಂಟಪಕ್ಕೆ ಮದುವೆಗೆ ತೆರಳಿದ್ದರು. ಇದೇ ಸಮಯ ಕಾಯುತ್ತಿದ್ದ ಖದೀಮರು, ಮನೆಯ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗಿದ್ದಾರೆ. ಗ್ರಾಮದ ನಿವಾಸಿ ಪೂರ್ಣಿಮಾ ಎಂಬುವವರ ಮಗನ ಮದುವೆ ಫೆ.23ರಂದು ಬೆಳಿಗ್ಗೆ ಗ್ರಾಮದ ಕಲ್ಯಾಣ ಮಂಟಪದಲ್ಲಿ ನಿಗದಿಯಾಗಿತ್ತು.ಹೀಗಾಗಿ ಮನೆಗೆ ಬೀಗ ಹಾಕಿ ಕುಟುಂಬ ಸದಸ್ಯರೆಲ್ಲರೂ ಕಲ್ಯಾಣ ಮಂಟಪಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು, ಕಳವು ಮಾಡಿದ್ದಾರೆ.
ದಾವಣಗೆರೆ: ಸರಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ; 3.50 ಲಕ್ಷ ಮೌಲ್ಯದ ಸ್ವತ್ತು ವಶ
ಮನೆಯಲ್ಲಿದ್ದ 50 ಗ್ರಾಂ ಚಿನ್ನ ಹಾಗೂ 4.5 ಲಕ್ಷ ನಗದನ್ನು ಕಳ್ಳರು ಕಳವು ಮಾಡಿದ್ದಾರೆ ಎಂದು ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪೂರ್ಣಿಮಾ ಅವರು ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ.