ದಾವಣಗೆರೆ: ಸರಗಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದು, ಆರೋಪಿಗಳಿಂದ 3,50,000 ರೂ. ಬೆಲೆಯ ಬಂಗಾರದ ಸರ ಮತ್ತು ಪಲ್ಸರ್ ಬೈಕ್ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ: ಹಾಫ್ ಹೆಲ್ಮೆಟ್ ತೆರವು ವಿಶೇಷ ಕಾರ್ಯಾಚರಣೆ; 2 ಸಾವಿರ ಹಾಫ್ ಹೆಲ್ಮೆಟ್ ವಶ- ಸೋಮವಾರದಿಂದ ದಂಡ ಫಿಕ್ಸ್
ದಾವಣಗೆರೆಯ ಜೀವನ್ ಭೀಮಾನಗರ 2ನೇ ಮುಖ್ಯ ರಸ್ತೆಯಲ್ಲಿ ನಾಗರತ್ನ ಜಿ ಎಸ್ ಎಂಬುವವರು ನಡೆದುಕೊಂಡು ಬರುತ್ತಿದ್ದರು. ಯಾರೋ ಇಬ್ಬರು ಬೈಕಿನಲ್ಲಿ ಬಂದು ಕೊರಳಲ್ಲಿದ್ದ 35 ಗ್ರಾಂ ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಅಂತ ದಿ:25.01.2023 ರಂದು ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ದಾವಣಗೆರೆ: ಬೈಕ್ ವ್ಹಿಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕರ ಮೇಲೆ ಬಿತ್ತು ಕೇಸ್
ಈ ಪ್ರಕರಣ ಆರೋಪಿ ಹಾಗೂ ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಉಮಾಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಶ್ರೀ ಎಂ ಸಂತೋ಼ಷ್ ಮತ್ತು ಮಂಜುನಾಥ್. ಜಿ. ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ.ಬಿ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿರವರನ್ನೊಳಗೊಂಡ ತಂಡ ದಿ:21.02.2025 ರಂದು ಪ್ರಕರಣದ ಆರೋಪಿಗಳನ್ನು ಬಂಧಿಸಿದ್ದಾರೆ.
ದಾವಣಗೆರೆ: ಖಾಸಗಿ ಹೋಟೆಲ್ ನಲ್ಲಿ ಇಸ್ಫೀಟ್ ಜೂಜಾಟದ ಮೇಲೆ ದಾಳಿ; 26 ಜನ ಬಂಧನ- 24.86 ಲಕ್ಷ ನಗದು ವಶ
ಆರೋಪಿ ಎ1 ಗಜೇಂದ್ರ.ಕೆ, (25) ಪೇಂಟ್ ಕೆಲಸ, ವಾಸ-ತೋಳಹುಣಸೆ ಗ್ರಾಮ, ದಾವಣಗೆರೆ (ತಾ), ಹಾಲಿ ವಾಸ-ಉಚ್ಚಂಗಿದುರ್ಗ ಗ್ರಾಮ, ಹರಪನಹಳ್ಳಿ ತಾ. ವಿಜಯನಗರ (ಜಿ), ಎ2 ಹನುಮಂತನಾಯ್ಕ, 35 ವರ್ಷ, ಕೂಲಿ ಕೆಲಸ, ವಾಸ- ತೋಳಹುಣಸೇ ಗ್ರಾಮ, ದಾವಣಗೆರೆ(ತಾ) ಇವರನ್ನು ಭೂಮಿಕಾ ನಗರ ಚೆಕ್ ಪೋಸ್ಟ್ ನಲ್ಲಿ ವಶಕ್ಕೆ ಪಡೆಯಲಾಯಿತು. ಆರೋಪಿತರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ಆರೋಪಿತರು ಸುಲಿಗೆ ಮಾಡಿಕೊಂಡು ಹೋಗಿದ್ದ ಕೆ.ಟಿಜೆ ನಗರ ಪೊಲೀಸ್ ಠಾಣೆ ಪ್ರಕರಣದ 2,50,000/- ರೂ ಬೆಲೆ ಬಾಳುವ 34.730 ಗ್ರಾಂ ಬಂಗಾರದ ಸರ ಮತ್ತು ಕೃತ್ಯಕ್ಕೆ ಬಳಸಿದ್ದ ಕಳ್ಳತನ ಮಾಡಿಕೊಂಡು ಬಂದ 1,00,000/- ಬೆಲೆ ಬಾಳುವ ಪಲ್ಸರ್ ಬೈಕ್ ಒಟ್ಟು 3,50,000/-ರೂ ಬೆಲೆಯ ಬಂಗಾರದ ಸರ ಮತ್ತು ಪಲ್ಸರ್ ಬೈಕನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಸುನೀಲ್ ಕುಮಾರ್.ಹೆಚ್.ಎಸ್. ಪಿಎಸ್ ಐ ಲತಾ.ಆರ್ ಹಾಗೂ ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ. ಗೀತಾ. ಮತ್ತು ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್ ಸಿಬ್ಬಂದಿಗಳನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.



