ದಾವಣಗೆರೆ: ಪ್ರತ್ಯೇಕ ಬೈಕ್ ಕಳ್ಳತನ ಪ್ರಕರಣಗಳಲ್ಲಿ 05 ಆರೋಪಿತನನ್ನು ಬಂಧಿಸಿದ್ದು, 3.85 ಲಕ್ಷ ಮೌಲ್ಯದ 06 ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
01) ದಿನಾಂಕ 24.10.2024 ರಂದು ರಾತ್ರಿ ಪರ‍್ಯಾದಿಯವರಾದ ಬಲವಂತ್.ಎ ನಿಲುಗಲ್ ಎಂಬುಔರು ರಾಯಲ್ ಎನ್ ಪೀಲ್ಡ್ ಬೈಕನ್ನು ಗಣೇಶ ಲೇ ಔಟ್ ನಲ್ಲಿರುವ ತಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು. ದಿ:25.10.2024 ರಂದು ದೂರು ನೀಡಿ ಮೇರೆಗೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
02) ನಾಗರಾಜ.ಎಸ್ ರವರು ತಮ್ಮ ಪ್ಯಾಷನ್ ಪ್ರೋ ಬೈಕನ್ನು ಚಿಕ್ಕನಹಳ್ಳಿ ಹೊಸ ಬಡಾವಣೆಯಲ್ಲಿರುವ ತಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಅಂತ ದಿನಾಂಕ:08.02.2025 ರಂದು ನೀಡಿದ ದೂರಿನ ಮೇರೆಗೆ *ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಸದರಿ ಮೇಲ್ಕಂಡ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಆರೋಪಿತರು ಹಾಗು ಮಾಲು ಪತ್ತೆಗಾಗಿ ಪೊಲೀಸ್ ಅಧೀಕ್ಷಕ ಉಮಾಪ್ರಶಾಂತ್ ಹಾಗೂ ಎಎಸ್ಪಿಗಳಾದ ವಿಜಯಕುಮಾರ್ ಶ ಎಂ.ಸಂತೋ಼ಷ್ ಮತ್ತು ಮಂಜುನಾಥ್. ಜಿ. ರವರ ಮತ್ತು ಡಿವೈಎಸ್ಪಿ ಶರಣ ಬಸವೇಶ್ವರ. ಬಿ. ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್ ನೇತೃತ್ವದಲ್ಲಿ ಪಿ.ಎಸ್.ಐ ಲತಾ.ಆರ್. ಹಾಗು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿ, ಗಿರೀಶ್ ಗೌಡ, ಸಿದ್ದಪ್ಪ, ಮಂಜಪ್ಪ, ನಾಗರಾಜ. ಡಿ.ಬಿ. ಹನುಮಂತಪ್ಪ. ಎಂ. ಮತ್ತು ಶ್ರೀಮತಿ ಗೌರಮ್ಮ, ಗೀತಾ ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ರಮೇಶ, ಶಿವಕುಮಾರ್. ಬಿ,ಕೆ. ಹಾಗೂ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‌ನ ಸಿಬ್ಬಂದಿಯವರಾದ ಮಾರುತಿ ಮತ್ತು ಸೋಮು ಒಳಗೊಂಡ ತಂಡ ಮೇಲ್ಕಂಡ ಪ್ರತ್ಯೇಕ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಕೆ.ಟಿ.ಜೆ.ನಗರ ಪೊಲೀಸ್ ಠಾಣೆ ಆರೋಪಿಗಳಾದ ಎ1 ಮೊಹವ್ಮದ್ ಸೂಪೀಯಾನ್ (22), ವಾಸ-ಮಿಲಗಟ್ಟ, ಶಿವಮೊಗ್ಗ, 2) ಮೊಹವ್ಮದ್ ದಾದಾಪೀರ್ (20) , ವಾಸ-1ನೇ ಕ್ರಾಸ್ ಕೆಳಗಿನ ತುಂಗಾನಗರ ಶಿವಮೊಗ್ಗ, 3 ) ಅಲ್ತಾಪ್ (22) , ವಾಸ-ಅಮರಪ್ಪನ ತೋಟ ದಾವಣಗೆರೆ, 4) ಬಾಬ್ಜಾನ್ ( 30) , ಅಜಾದ್ ನಗರ ದಾವಣಗೆರೆ ರವರನ್ನು ವಶಕ್ಕೆ ಪಡೆದುಕೊಂಡು ಕೂಲಂಕುಷವಾಗಿ ವಿಚಾರ ಮಾಡಿ ಆರೋಪಿತರು ಕಳ್ಳತನ ಮಾಡಿಕೊಂಡು ಹೋಗಿದ್ದ
- ಕೆ.ಟಿಜೆ ನಗರ ಪೊಲೀಸ್ ಠಾಣೆಯ ರಾಯಲ್ ಎನ್ ಪೀಲ್ಡ್ ಬೈಕ್
- ಗಾಂಧಿನಗರ ಪೊಲೀಸ್ ಠಾಣೆಯ ರಾಯಲ್ ಎನ್ ಪೀಲ್ಡ್ ಬೈಕ್
- ಮಲೆಬೆನ್ನೂರು ಪೊಲೀಸ್ ಠಾಣೆಯ ಪ್ರಕರಣದ ಪಲ್ಸರ್ ಬೈಕ್
- ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಯ ಪಲ್ಸರ್ ಬೈಕ್
ಒಟ್ಟು 4 ಪ್ರಕರಣಗಳ ಒಟ್ಟು 2,80000/-ರೂ ಬೆಲೆಯ 4 ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಆರೋಪಿತರ ಹಿನ್ನೆಲೆ: ಎ1 ಮೊಹವ್ಮದ್ ಸೂಪೀಯಾನ್ ಈತನ ವಿರುದ್ದ ಆಜಾದ್ ನಗರ ಪೊಲಿಸ್ ಠಾಣೆ, ರಾಣೇಬೆನ್ನೂರು ಠಾಣೆ, ಅರಸಿಕೆರೆ ಪೊಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಬೈಕ್ ಕಳ್ಳತನ ಪ್ರಕರಣಗಳಲ್ಲಿ ಆರೋಪಿತನಾಗಿರುತ್ತಾನೆ.
ಕೆ.ಟಿ.ಜೆ.ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತನಾದ ರವಿ.ಆರ್ (26), ತರಗಾರ ಕೆಲಸ, ವಾಸ-ಸಿಂಗಟಗೆರೆ ಗ್ರಾಮ, ಹೊನ್ನಾಳಿ(ತಾ) ದಾವಣಗೆರೆ ಜಿಲ್ಲೆ. ಇವನನ್ನು ವಶಕ್ಕೆ ಪಡೆದುಕೊಂಡು ಸದರಿ ಆರೋಪಿತನನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ಆರೋಪಿತನು ಕಳ್ಳತನ ಮಾಡಿಕೊಂಡು ಹೋಗಿದ್ದ 1)ಕೆ.ಟಿಜೆ ನಗರ ಪೊಲೀಸ್ ಠಾಣೆಯ ಫ್ಯಾಷನ್ ಪ್ರೋ ಬೈಕ್ 2) ಹೊನ್ನಾಳಿ ಪೊಲೀಸ್ ಠಾಣೆಯ ಪಲ್ಸರ್ ಬೈಕ್ ಒಟ್ಟು 2 ಪ್ರಕರಣಗಳ ಒಟ್ಟು 1,05000/-ರೂ ಬೆಲೆಯ 2 ಬೈಕ್ ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣಗಳಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.