ದಾವಣಗೆರೆ: ಅಕ್ರಮ ಪಡಿತರ ಅಕ್ಕಿ ದಾಸ್ತಾನು ಗೋಡಾನ್ ಮೇಲೆ ದಾಳಿಮಾಡಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ ಪ್ರಕರಣದ ಅಪರಾಧಿಗಳಿಗೆ 01 ವರ್ಷ ಕಾರಾಗೃಹ ಶಿಕ್ಷೆ ಹಾಗೂ ಒಟ್ಟು 60 ಸಾವಿರ ರೂ ದಂಡ ವಿಧಿಸಲಾಗಿದೆ
ದಿನಾಂಕ : 08/04/2017ರಂದು ಹಳೇಬಾತಿ ಗ್ರಾಮದ ಉಮಾಪತಯ್ಯ ಗೋಡಾನ್ ಹತ್ತಿರ ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ 550 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ದಾಸ್ತಾನು ಮಾಡಿರುವ ಮಾಹಿತಿ ಮೇರೆಗೆ ದಾಳಿ ಮಾಡಲು ಹೋಗಲಾಗಿತ್ತು. ಈ ವೇಳೆ ಎ1-ಉಮಾಪತಯ್ಯ, ಎ2-ಪ್ರಶಾಂತ್ , ಎ3-ಕಿರಣ್ ಹಾಗೂ ಇತರರು ಸೇರಿಕೊಂಡು ಅಧಿಕಾರಿಗಳ ಮೇಲೆ ಹಲ್ಲೆಗೆಯತ್ನಿಸಿದ್ದರು. ಸ್ಥಳದಲ್ಲಿದ್ದ 02 ಲಾರಿ ಮತ್ತು ಟ್ರ್ಯಾಕ್ಟರ್ ಟ್ಯಾಲಿಯನ್ನು ತಡೆಯಲು ಹೋದಾಗ ಕೆಎ-17, ಎ-5022 ನೇ ಲಾರಿ ಚಾಲಕನು ಅಧಿಕಾರಿಗಳ ಮೇಲೆ ಲಾರಿಯನ್ನು ಚಾಲಯಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದರು.
ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ಬೈದಾಡಿ 500/- ರೂ ನೋಟಿನ ಕಟ್ಟನ್ನು ತೆಗೆದುಕೊಂಡು ಬಂದು ಅಧಿಕಾರಿಗಳಿಗೆ ನಿಂದಿಸಿ ಅಸಭ್ಯವಾಗಿ ವರ್ತಿಸಿದ್ದ ದೂರಿನ ಮೇರೆಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖಾಧಿಕಾರಿ ಕಿರಣ್ ಕುಮಾರ್ ತನಿಖೆ
ಕೈಗೊಂಡು ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.
ಈ ಸಂಬಂಧ ಘನ 02 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಪ್ರವೀಣ್ ಕುಮಾರ್ ಆರ್.ಎನ್ ರವರು ಅಪರಾಧಿಗಳ ಎ1-ಉಮಾಪತಯ್ಯ ( 58) ಎ2-ಪ್ರಶಾಂತ್ (34) ಎ3-ಕಿರಣ್ ( 20 ) ಆರೋಪ ಸಾಬೀತಾಗಿದ್ದರಿಂದ ದಿನಾಂಕ:22-01-2025 ರಂದು ಅಪರಾಧಿಗಳಿಗೆ 01 ವರ್ಷ ಸಾದಾ ಕಾರಾಗೃಹ ಶಿಕ್ಷೆ, ತಲಾ 20,000/-ರೂ ದಂಡ ಒಟ್ಟು ದಂಡದ ಮೊತ್ತ 60,000/- ರೂ ದಂಡ ವಿಧಿಸಿ ತೀರ್ಪು ನೀಡಿರುತ್ತದೆ. ಈ ಪ್ರಕರಣದಲ್ಲಿ ದೂರುದಾಋ ಪರವಾಗಿ ಸರ್ಕಾರಿ ವಕೀಲ ಜಯ್ಯಪ್ಪ ಕೆ.ಜಿ ನ್ಯಾಯ ಮಂಡನೆ ಮಾಡಿದ್ದರು.



