ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಮಾರಿಕೊಪ್ಪ ರಸ್ತೆಯ ಮನೆಯೊಂದರಲ್ಲಿ ಬೀಗ ಮುರಿದು 3.15 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನವಾದ ಘಟನೆ ನಡೆದಿದೆ.
ದೀಪಾ ನಾಗರಾಜ್ ಅವರ ಮನೆಯಲ್ಲಿ ಸುಮಾರು 3,15,000ಮೌಲ್ಯದ ಬಂಗಾರ, ನಗದು ಹಣ ಕಳ್ಳತನವಾಗಿದೆ. ಬೀಗ ಒಡೆದು ಮನೆಗೆ ನುಗ್ಗಿದ ಕಳ್ಳರು, 45 ಗ್ರಾಂ ಬಂಗಾರದ ಒಡವೆ, 80 ಗ್ರಾಂ ಹ್ಯಾಂಗಿಂಗ್, 6 ಗ್ರಾಂನ ಮೂರು ಉಂಗುರ ಮತ್ತು 50 ಸಾವಿರ ನಗದು ಸೇರಿದಂತೆ 2,65,000 ಮೌಲ್ಯದ ಒಡವೆ ಬಂಗಾರ ಕಳ್ಳತನವಾಗಿದೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



