ದಾವಣಗೆರೆ: ಮಕ್ಕಳು ತಿನ್ನುವ ಕುರ್ ಕುರೇ ವಿಚಾರಕ್ಕೆ 2 ಕುಟುಂಬ ಮಧ್ಯೆ ಮಾರಾಮಾರಿ ನಡೆದಿದ್ದು, ಗಲಾಟೆಯಲ್ಲಿ ಗಾಯಗೊಂಡ 10ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಹೊನ್ನೆಬಾಗಿ ಗ್ರಾಮದಲ್ಲಿ ನಡೆದಿದೆ. ಕ್ಷುಲಕ ಕಾರಣಕ್ಕೆ ಪ್ರಾರಂಭವಾದ ಜಗಳ, ವಿಕೋಪಕ್ಕೆ ತಿರುಗಿ ದೊಡ್ಡ ಜಗಳವಾಗಿದ್ದು, ಪೊಲೀಸ್ ಠಾಣೆವರೆಗೂ ಬಂದಿದೆ. ಹೊನ್ನೇಬಾಗಿಯ ಅತೀಫ್ ಉಲ್ಲಾ ಫ್ಯಾಮಿಲಿ ಹಾಗೂ ಸದ್ದಾಂ ಕುಟುಂಬ ನಡುವೆ ಗಲಾಟೆ ನಡೆದಿದೆ. ಅತೀಫ್ ಉಲ್ಲಾ ಗ್ರಾಮದಲ್ಲಿ ಸಣ್ಣದೊಂದು ಕಿರಾಣಿ ಅಂಗಡಿ ಇಟ್ಟುಕೊಂಡಿದ್ದರು.ಅತೀಫ್ ಅಂಗಡಿಯಲ್ಲಿ ಸದ್ದಾಂ ಕುಟುಂಬದ ಮಕ್ಕಳು ಕುರ್‌ಕುರೇ ಖರೀದಿ ಮಾಡಿದ್ದರು. ಅವಧಿ ಮೀರಿದ ಕುರ್‌ಕುರೇ ಮಾರಾಟ ಮಾಡಿದ್ದೀಯಾ ಬೇರೆಯ ಕುರ್ ಕುರೇ ಕೊಡಲು ಕೇಳಿದ್ದಕ್ಕೆ ಎರಡು ಕುಟುಂಬಸ್ಥರ ನಡುವೆ ಗಲಾಟೆ ನಡೆದಿದೆ. ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ ಮೀರಿ ರ ಕೈ ಕೈ ಮೀಲಾಯಿಸಿದ್ದಾರೆ. ರಸ್ತೆ ಬದಿ ಹೋಟೆಲ್ ಇಟ್ಟುಕೊಂಡಿದ್ದ ಸದ್ದಾಂ, ಗಲಾಟೆ ಹಿನ್ನೆಲೆ ಅತೀಫ್ ಮೇಲೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಸದ್ದಾಂ ದೂರು ದಾಖಲಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಅತೀಫ್, ಇದೇ ದ್ವೇಷಕ್ಕೆ 30ಕ್ಕೂ ಹೆಚ್ವು ಜನರಿಂದ ಸದ್ದಾಂ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿ ಹೋಟೆಲ್ ಧ್ವಸಂ ಮಾಡಿಸಿದ್ದಾನೆ.
ಗಲಾಟೆಯನ್ನು ಬಿಡಿಸಲು ಬಂದವರ ಮೇಲೆಯೂ ಹಲ್ಲೆ ನಡೆದಿದೆ. ಎರಡು ಕಡೆಯವರಿಂದ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿ ಪೊಲೀಸರ ಭಿಗಿ ಭದ್ರತೆ ಇದ್ದು, ಬಂಧನ ಭೀತಿಯಿಂದ 25ಕ್ಕೂ ಹೆಚ್ಚು ಜನ ಗ್ರಾಮವನ್ನು ತೊರೆದಿದ್ದಾರೆ.



