ದಾವಣಗೆರೆ: ಶಿವಗಂಗಾ ಕನ್ವೆನ್ನನ್ ಹಾಲ್ ಹತ್ತಿರ ಇರುವ ಅಂಗಡಿ ಮುಂಭಾಗ ನಿಲ್ಲಿಸಿದ್ದ 10 ಲಕ್ಷ ಮೌಲ್ಯದ ಕಾರು ಕಳ್ಳತನವಾದ 24 ಗಂಟೆಯಲ್ಲಿ ಆರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದು, ಆರೋಪಿಯನ್ನು ಹರಿಹದಲ್ಲಿ ಬಂಧನ ಮಾಡಲಾಗಿದೆ. ಆರೋಪಿತನಿಂದ ಅಂದಾಜು 10 ಲಕ್ಷ ರೂ. ಮೌಲ್ಯದ ಟೋಯೋಟಾ ಪಾರ್ಚುನರ್ ಕಾರನ್ನು ವಶ ಪಡಿಸಿಕೊಳ್ಳಲಾಗಿದೆ.
ದಿನಾಂಕ 06.12.2024 ರಂದು ಚಂದನ್ ಹೆಚ್ ವಿದ್ಯಾ ನಗರ ಠಾಣೆಗೆ ಹಾಜರಾಗಿ ದೂರು ಕಾರು ಕಳ್ಳತನ ದೂರು ನೀಡಿದ್ದರು. ತಾನು ಹಣ್ಣಿನ ವ್ಯಾಪಾರ ಮಾಡುತ್ತಿದ್ದು, ಬೆಳಿಗ್ಗೆ 6.00 ಗಂಟೆಗೆ KA05ML1728 ನೇ ನಂಬರಿನ ಟೋಯೋಟಾ ಪಾರ್ಚುನರ್ ಕಾರನ್ನು ಬಾಲಾಜಿ ಬಡಾವಣೆ ಶಿವಗಂಗಾ ಕನ್ವೆನ್ನನ್ ಹಾಲ್ ಹತ್ತಿರ ತನ್ನ ಸೆಲ್ಲರ್ ಇರುವ ಬಿಲ್ಡಿಂಗ್ ಮುಂಭಾಗ ನಿಲ್ಲಿಸಿ ಕಾರಿಗೆ ಹಣ್ಣಿನ ಟ್ರೇಗಳನ್ನು ತುಂಬಲು ತಮ್ಮ ಅಂಗಡಿ ಕೆಲಸ ಮಾಡುವ ಹುಡುಗನಿಗೆ ಹೇಳಿದ್ದೇನು. ಮನೆಗೆ ಸ್ನಾನಕ್ಕೆಂದು ಹೋಗಿದ್ದಾಗ ಯಾರೋ ಇಬ್ಬರು ಕಳ್ಳರು ಬೈಕಿನಲ್ಲಿ ಬಂದು ಕಾರನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ. ಪತ್ತೆ ಮಾಡಿಕೊಡಿ ಎಂದು ಪ್ರಕರಣ ದಾಖಲಿಸಿದ್ದರು.
ಎಎಸ್ಪಿ ವಿಜಯಕುಮಾರ. ಎಂ. ಸಂತೋಷ್, ಎಂ. ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮತ್ತು ವಿದ್ಯಾನಗರ ಠಾಣೆ ನಿರೀಕ್ಷಕ ಶಿಲ್ಪಾ ವೈ.ಎಸ್ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಶ್ವನಾಥ ಜಿ.ಎನ್ ವಿಜಯ ಎಮ್ ಹಾಗೂ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಆರೋಪಿ ದಾವಣಗೆರೆ ನಿವಾಸಿ ಪತೇಹ್ ಅಹಮದ್ @ ಪತ್ತೆ ಪೈಲ್ವಾನ್ (30) ಇತನನ್ನು ಹರಿಹರ ನಗರದಲ್ಲಿ ಬಂಧಿಸಿದ್ದು, ಆರೋಪಿತನಿಂದ ಅಂದಾಜು 10 ಲಕ್ಷ ರೂ KA05ML1728 ನೇ ನಂಬರಿನ ಟೋಯೋಟಾ ಪಾರ್ಚುನರ್ ಕಾರನ್ನು ವಶ ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸದರಿ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಆರೋಪಿ ಪತೇಹ್ ಅಹಮದ್ @ ಪತ್ತೆ ಪೈಲ್ವಾನ್ ಈತನು ಕಾರನ್ನು ಕದ್ದು ತೆಗೆದುಕೊಂಡು ಹೋಗಿ ಹರಿಹರ ನಗರದ ಕೋಟೆ ಆಂಜನೇಯ ದೇವಾಸ್ಥಾನದ ಬಗ್ಗೆ ಚರ್ಚ್ ರಸ್ತೆಯಲ್ಲಿ ಬೈಕ್ ಗೆ ಅಪಘಾತ ಪಡಿಸಿರುತ್ತಾನೆ. ಈ ಸಂಬಂಧ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಆರೋಪಿತನ ಹಿನ್ನಲೆ: ಆರೋಪಿಪತೇಹ್ ಅಹಮದ್ @ ಪತ್ತೆ ಪೈಲ್ವಾನ್ ಈತನ ಮೇಲೆ ಈ ಹಿಂದೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಕಾರ್ಯಾಚರಣೆಯಲ್ಲಿ ಭಾಗಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿದ್ದಾರೆ.