ದಾವಣಗೆರೆ: ಕಾಪರ್ ಏಜ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಟ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ ಮಾಲೀಕ ಶರತ್ ಜಿ.ಎನ್. (35) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನಗರದ ಎಸ್.ಎಸ್. ಬಡಾವಣೆಯ ನಿವಾಸಿಯಾದ ಶರತ್ ಅವಿವಾಹಿತರಾಗಿದ್ದರು. ಶರತ್, ತಂದೆ – ತಾಯಿ ಕಾರ್ಯಕ್ರಮಕ್ಕೆಂದು ಹೊರಗಡೆ ಹೋಗಿದ್ದಾಗ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ದಾವಣಗೆರೆಯ ಬಡಾವಣೆಯ ಎಂಸಿಸಿ ಬಿ ಬ್ಲಾಕ್ ನ ಈಜುಕೊಳ ಸಮೀಪ ಕಾಪರ್ ಏಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಸಂಸ್ಥೆ ಕಟ್ಟಿದ್ದರು. ಸಾವಿರಾರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಪ್ರಸಿದ್ಧಿಗಳಿಸಿದ್ದರು. ದಾವಣಗೆರೆಯಲ್ಲದೆ, ವಿವಿಧ ಜಿಲ್ಲೆಗಳಲ್ಲಿ ಸಂಸ್ಥೆಯ ಶಾಖೆಗಳಿವೆ.
ಐಎಎಸ್, ಐಪಿಎಸ್ ಯಲ್ಲಿ ಶರತ್ ಪಾಸ್ ಆಗದ ಕೊರಗು ಇತ್ತು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಯಾವುದೇ ಡೆತ್‌ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



