ದಾವಣಗೆರೆ: ನಗರದಲ್ಲಿ ದಿನದಿಂದ ದಿನಕ್ಕೆ ಕಳ್ಳತನ ಪ್ರಕಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಇದೀಗ ಹೈಟೆಕ್ ಕಳವು ಪ್ರಕರಣಗಳು ಸಂಖ್ಯೆ ಹೆಚ್ಚಾಗುತ್ತಿದೆ. ಎರಡು ದಿನದ ಹಿಂದೆಯಷ್ಟೇ ನಗರದ ಬಾರ್ ಒಂದರಲ್ಲಿ ಮದ್ಯದ ಬಾಕ್ಸ್ ಜತೆ ಸಿಸಿಟಿವಿ ಡಿವಿಆರ್ ತೆಗೆದುಕೊಂಡು ಹೋದ ಘಟನೆ ಮಾಸುವ ಮುನ್ನವೇ ಇಂತಹದ್ದೇ ಮತ್ತೊಂದು ಪ್ರಕರಣ ನಗರದಲ್ಲಿ ದಾಖಲಾಗಿದೆ. ನಗರದ ಎಸ್ ಪಿಎಸ್ ನಗರದ ರಿಂಗ್ ರಸ್ತೆ ಬಳಿಯ ಪೇಂಟ್ ಅಂಡಿಯಲ್ಲಿ ಕಳ್ಳತನವಾಗಿದ್ದು, 2.25 ಲಕ್ಷದ ಜತೆಗೆ ಸಿಸಿಟಿವಿ ಡಿವಿಆರ್ ಕಳವು ಮಾಡಿದ್ದಾರೆ. ಈ ಎರಡು ಪ್ರಕರಣದಲ್ಲಿ ಸಾಕ್ಷಿ ಸಿಗದಂತೆ ಸಿಸಿಟಿವಿ ಡಿವಿಆರ್ ತಗೆದುಕೊಂಡು ಹೋಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಎಸ್ ಪಿ ಎಸ್ ನಗರದ ರಿಂಗ್ ರಸ್ತೆ ಬದಿ ರಿಯಾನ್ ಮಲ್ಲಿಕ್ ಎಂಬಾತ ಎಂ ಎಸ್ ಅಂಡ್ ಪೇಂಟ್ಸ್ ಅಂಡಿಯೊಂದನ್ನು ಇಟ್ಟುಕೊಂಡಿದ್ದಾನೆ. ಈ ಪೇಂಟ್ ಅಂಡಿಯನ್ನು ಎಂದಿನಂತೆ ವ್ಯಾಪಾರ ಮುಗಿಸಿದ ನಂತರ ರಾತ್ರಿ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ಧಾನೆ. ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಅಂಗಡಿಯ ಶೀಟ್ ಕಟ್ ಮಾಡಿ ಒಳಗೆ ಬಂದ ಕಳ್ಳರು, ಡ್ರಾನಲ್ಲಿದ್ದ 2.25 ಲಕ್ಷ ನಗದು ಹಾಗೂ ಸಿಸಿ ಕ್ಯಾಮರಾ ಡಿವಿಆರ್ ಕಳವು ಮಾಡಿದ್ದಾರೆ. ಈ ಬಗ್ಗೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದೆ.