ದಾವಣಗೆರೆ: ಯಮಹಾ ಆರ್ ಎಕ್ಸ್ ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 03 ಲಕ್ಷ ರೂ ಮೌಲ್ಯದ ಬೈಕ್ ವಶಕ್ಕೆ ಪಡೆಯಲಾಗಿದೆ.
ನಾಗರಾಜ್ ಅಂಗಡಿ ನ.9ರಂದು ವಿದ್ಯಾ ನಗರ ಠಾಣೆಗೆ ಹಾಜರಾಗಿ ತಾನು ದಿ: 08.11.2024 ರಂದು ರಾತ್ರಿ 8.30 ಗಂಟೆಗೆ ತರಳಬಾಳು ಬಡಾವಣೆಯಲ್ಲಿರುವ ತಮ್ಮ ಮನೆಯ ಮುಂದೆ ತಮ್ಮ ಬಾಬ್ತು ಕೆಎ17-ಕೆ-9666 ನೇ ನಂಬರಿನ ಯಮಹಾ ಆರ್ ಎಕ್ಸ್-135 ಬೈಕನ್ನು ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡಿದ್ದು ನಂತರ ಬೆಳಿಗ್ಗೆ ಎದ್ದು ನೋಡಿದಗ ಬೈಕ್ ಇರಲಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ್ದರು.
3 ಲಕ್ಷ ಮೌಲ್ಯದ ಬೈಕ್ ವಶ: ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು, ಆರೋಪಿ ಪತ್ತೆ ಮಾಡಲು ಎಎಸ್ಪಿಗಳಾದ ವಿಜಯಕುಮಾರ.ಎಂ. ಸಂತೋಷ್, ಎಮ್.ಮಂಜುನಾಥ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮತ್ತು ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿ.ಎಸ್.ಐ ವಿಶ್ವನಾಥ ಜಿ.ಎನ್ ಹಾಗು ಸಿಬ್ಬಂದಿಗಳನ್ನೊಳಗೊಂಡ ತಂಡವು ಆರೋಪಿ ದರ್ಶನ್ ಜಿ (21), ವಾಸ ಎಸ್ ಓ ಜಿ ಕಾಲೋನಿ ದಾವಣಗೆರೆ. ಈತನನ್ನು ಬಂಧಿಸಿದ್ದು, ಆರೋಪಿತನಿಂದ ಒಟ್ಟು 03 ಲಕ್ಷ ರೂ ಮೌಲ್ಯದ 03 ಯಮಹಾ ಆರ್ ಎಕ್ಸ್ ಬೈಕುಗಳನ್ನ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಇನ್ನೊಬ್ಬ ಆರೋಪಿ ಪತ್ತೆಗೆ ಬಲೆ ಬೀಸಲಢಗಿದೆ. ಸದರಿ ಆರೋಪಿ ಪತ್ತೆಯಿಂದ ವಿದ್ಯಾ ನಗರ ಪೊಲೀಸ್ ಠಾಣೆಯ ಒಂದು ಬೈಕ್ ಕಳ್ಳತನ ಪ್ರಕರಣ ಹಾಗು ಬಡಾವಣೆ ಪೊಲೀಸ್ ಠಾಣೆಯ ಎರಡು ಬೈಕ್ ಕಳ್ಳತನ ಪ್ರಕರಣಗಳು ಪತ್ತೆಯಾಗಿರುತ್ತವೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸನೆ ವ್ಯಕ್ತಪಡಿಸಿದ್ದಾರೆ.