ದಾವಣಗೆರೆ: ಪ್ರತಿ ದಿನ ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯೊಬ್ಬರು 4.88 ಲಕ್ಷ ಬೆಲೆಯ ಚಿನ್ನಾಭರಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
- ಮನೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯಿಂದ ಕಳ್ಳತನ
- ಒಟ್ಟು 4,88,000/- ರೂ ಮೌಲ್ಯದ ಚಿನ್ನಾಭರಣ ವಶ
- ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಆರೋಪಿ ಬಂಧನ
- ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ
ದಾವಣಗೆರೆಯ ಜಯನಗರ ‘ಎ’ ಬ್ಲಾಕ್ ನ ಉಮಾ ಮಹೇಂದ್ರಕರ್ ಎಂಬುವವರು, ತಮ್ಮ ಮನೆಯ ರೂಮ್ ನ ಡ್ರಾನಲ್ಲಿಟ್ಟಿದ್ದ ಸುಮಾರು ಒಟ್ಟು 4,88,000/- ರೂ ಬೆಲೆಯ ಸುಮಾರು100 ಗ್ರಾಂ ಬಂಗಾರದ ಆಭರಣಗಳನ್ನು ನಮ್ಮ ಮನೆಯಲ್ಲಿ ಕೆಲಸಕ್ಕೆ ಬರುತ್ತಿದ್ದ ಹೆಚ್.ಸಾಕಮ್ಮ ಇವರು ಕಳ್ಳತನ ಮಾಡಿಕೊಂಡು ಹೋಗಿರುವ ಅನುಮಾನವಿದೆ ಎಂದು ದೂರು ನೀಡಿದ್ದರು. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈವಪ್ರಕರಣದಲ್ಲಿ ಆರೋಪಿ ಪತ್ತೆಗಾಗಿ ಎಎಸ್ಪಿಗಳಾದ ವಿಜಯಕುಮಾರ್ ಎಂ ಸಂತೋಷ್ , ಮಂಜುನಾಥ ಜಿ ಹಾಗೂ ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ಮಾರ್ಗದರ್ಶನದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪಿ.ಐ. ಸುನೀಲ್ ಕುಮಾರ್.ಹೆಚ್.ಎಸ್. ನೇತೃತ್ವದಲ್ಲಿ ಸಿಬ್ಬಂದಿಗಳನ್ನೊಳಗೊಂಡ ತಂಡ ರಚುಸಲಾಗಿತಗತು. ಈ ತಂಡ ನ.6ರಂದು ಪ್ರಕರಣದ ಆರೋಪಿ ಹೆಚ್. ಸಾಕಮ್ಮ (35 ) ಮನೆ ಕೆಲಸ, ವಾಸ: ಶ್ರೀರಾಮನಗರ ಇವರನ್ನು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರ ಮಾಡಿದಾಗ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಏನೆಲ್ಲಾ ವಶಕ್ಕೆ ಪಡೆಯಲಾಯಿತು; ಒಟ್ಟು 4,88,000/-ರೂ ಬೆಲೆಯ 1) ಸುಮಾರು 30 ಗ್ರಾಂ. ತೂಕದ ಹಸಿರು ಜೇಡ ಹರಳಿನ ಬಂಗಾರದ ನಕ್ಲೀಸ್ 2) ಸುಮಾರು 4.5 ಗ್ರಾಂ. ತೂಕದ ಒಂದು ಜೊತೆ ಓಲೆ 3) ಸುಮಾರು 60 ಗ್ರಾಂ. ತೂಕದ ಎರಡು ಎಳೆಯ ಬಂಗಾರದ ಸರ 4) 15 ಗ್ರಾಂ. ತೂಕದ ಬಂಗಾರದ ಗುಂಡಿನ ಸರವನ್ನು ವಶ ಪಡಿಸಿಕೊಂಡಿರುತ್ತಾರೆ.



