ದಾವಣಗೆರೆ: ಅಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜೊಗಲ್ ಬಾಬಾ ನಗರದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟಮಾಡುತ್ತಿದ್ದ ಮಹಿಳೆ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 1.20 ಲಕ್ಷ ರೂ. ಮೌಲ್ಯದ 1 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಹರಿಹರದ ಫಹಿಮಾ ಖಾನಂ (42), ವಸೀಂ ಅಲಿಯಾಸ್ ಮಹಮ್ಮದ್ ಹನೀಫ್ (24) ಬಂಧಿತ ಆರೋಪಿಗಳು, ಇನ್ನೊಬ್ಬ ಆರೋಪಿ ಶಾಕೀರ್ ಖಾನ್ ತಲೆ ಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ.
ಸಾರ್ವಜನಿಕರಿಗೆ ಗಾಂಜಾ ಮಾರಾಟವಾಗುತ್ತಿರುವ ಕುರಿತು ಬಂದ
ಖಚಿತ ಮಾಹಿತಿ ಮೇರೆಗೆ ನಗರ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ಪಿಎಸ್‌ಐಗಳಾದ ಅಶ್ವಿನ್ ಕುಮಾರ್, ಇಮ್ಮಿಯಾಜ್ ಅಲ್ತಾಫ್ ಮತ್ತು ಸಿಬ್ಬಂದಿಗಳಾದ ನರೇಶ್ ಎ.ಪಿ., ಕೃಷ್ಣ, ಎನ್, ಖಾಜಾ ಹುಸೇನ್ ವೆಂಕಟೇಶ್ ಜಿ.ಆರ್, ಲೋಕೇಶ್ ಗುಗ್ಗರಿ ಅವರುಗಳನ್ನು ಒಳಗೊಂಡ ತಂಡ ದಾಳಿ ನಡೆಸಿ ಇಬ್ಬರನ್ನು ಬಂಧಿಸಿ 1.20 ಲಕ್ಷ ರೂ ಮೌಲ್ಯದ ಗಾಂಜಾ ಸೊಪ್ಪು ವಶಪಡಿಸಿಕೊಂಡಿದ್ದಾರೆ.



