ದಾವಣಗೆರೆ: ಚಿನ್ನಾಭರಣ, ಬಟ್ಟೆ ಮತ್ತು ಆಧಾರ್ ಕಾರ್ಡ್ ಇದ್ದ ಬ್ಯಾಗ್ ನ್ನು ಆಟೋದಲ್ಲಿ ಬಿಟ್ಟು ಹೋದ ಮಹಿಳೆಗೆ ಹಿಂತಿರುಗಿಸಿದ ಚಾಲಕ ಹಾಗೂ ಪ್ರಕರಣ ಪತ್ತೆ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ಎಸ್ಪಿ ಉಮಾ ಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ನಗರದ ರೈಲ್ವೆ ಸ್ಟೇಶನ್ ಮುಂಭಾಗದ ಆಟೋ ನಿಲ್ದಾಣದಲ್ಲಿ ಆಟೋ ಬಾಡಿಗೆ ಮಾಡಿಕೊಂಡು ಆಜಾದ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ ಲೇಔಟ್ ಬಳಿ ಆಟೋ ರ ಇಳಿದು ಮನೆಗೆ ಹೋಗಿ ನೋಡಿದಾಗ ಚಿನ್ನದ ಆಭರಣಗಳು ಇದ್ದ ಬ್ಯಾಗನ್ನು ಆಟೋದಲ್ಲಿ ಬಿಟ್ಟಿರುವ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ನಜ್ಮಾ ಆಜಾದ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಆಜಾದ್ ನಗರ ಪೊಲೀಸರು ಆಟೋ ಮತ್ತು ಚಾಲಕನನ್ನು ಪತ್ತೆ ಮಾಡಿ ಆಟೋದಲ್ಲಿದ್ದ ಬ್ಯಾಗ್ ನಲ್ಲಿದ್ದ 1) 15 ಗ್ರಾಂ ತೂಕದ ಬಂಗಾರದ ಕಿವಿ ಒಲೆ, 2) ಸ್ಕೂಲ್ ಮಕ್ಕಳ ಬಟ್ಟೆ, 3) ಆಧಾರ್ ಕಾರ್ಡ ಹಾಗೂ ಇತರೆ ದಾಖಲೆಗಳನ್ನು ಆಟೋ ಚಾಲಕನ ಉಪಸ್ಥಿತಿಯಲ್ಲಿ ದೂರುದಾರರಿಗೆ ಹಸ್ತಾಂತರಿಸಲಾಯಿತು.
ಡಿವೈಎಸ್ಪಿ ಮಲ್ಲೇಶ್ ದೊಡ್ಡ ಮನಿ ಮಾರ್ಗದರ್ಶನದಂತೆ ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ್ ಆರ್ ಜಿ ಹಾಗೂ ಸಿಬ್ಬಂದಿಗಳಾದ ಮಂಜುನಾಥ ನಾಯ್ಕ್, ನರೇಶ್ ಎ.ಪಿ., ಗುಗ್ಗರಿ ಲೋಕೇಶ್, ಖಾಜಾ ಹುಸೇನ್, ಕೃಷ್ಣ, ಎನ್, ವೆಂಕಟೇಶ್ ಜಿ ಆರ್ ಒಳಗೊಂಡ ತಂಡವು 1ಲಕ್ಷ ರೂ ಮೌಲ್ಯದ ಆಭರಣಗಳನ್ನು ಪತ್ತೆ ಮಾಡಿ ವಾರಸುದಾರರಿಗೆ ಹಿಂತಿರುಗಿಸಲಾಗಿದೆ.



