ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ಇಂದು (ಅ.18) ಮತ್ತೆ ಕುಸಿತ ಕಂಡಿದೆ. ಗರಿಷ್ಠ ಬೆಲೆ ಕ್ವಿಂಟಲ್ ಗೆ 49,559ರೂ.ಗೆ ಇಳಿಕೆಯಾಗಿದೆ. ಈ ಮೂಲಕ ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದ್ರೆ 100ರೂ. ಕುಸಿದಿದೆ. ಇನ್ನೂ ಕನಿಷ್ಠ ಬೆಲೆ 42,012 ರೂ.ಗಳಾಗಿದೆ. ಈ ಮೂಲಕ 50 ಸಾವಿರ ಗಡಿ ಸಮೀಪ ಬಂದು ಇಳಿಕೆಯಾಗಿದೆ.
ಜೂನ್ ಮೊದಲ ವಾರ 54 ಸಾವಿರ ಗಡಿ ದಾಟಿದ್ದ ಬೆಲೆ, ಜೂ.20ರಿಂದ ದಿನದಿಂದ ದಿನಕ್ಕೆ ಕುಸಿಯುತ್ತ ಬಂದಿದ್ದು, ಸೆಪ್ಟೆಂಬರ್ ನಲ್ಲಿ ಹೊಸ ಅಡಿಕೆ 46 ಸಾವಿರ ಗಡಿ ತಲುಪಿತ್ತು. ಈಗ ಅಕ್ಟೋಬರ್ ನಲ್ಲಿ ಚೇತರಿಕೆ ಕಂಡು 50 ಸಾವಿರ ಗಡಿ ಸಮೀಪ ಬಂದಿದೆ. ಈ ಬಾರಿಯ ಉತ್ತಮ ಮುಂಗಾರು ಕೃಪೆಯಿಂದ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ತುಂಬಿದ್ದು, ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ನೀರು ಸಿಗುವ ಖಾತ್ರಿಯಾಗಿದೆ.
ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಈ ವರ್ಷ ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು. ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಈಗ ಜೋರು ಮಳೆಯಿಂದ ಬೋರ್ ವೆಲ್ ಗಳು ಚೇತರಿಕೆ ಕಂಡಿವೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಇನ್ನೂ ಹಿಂಗಾರು ಮಳೆ ಸಹ ಸಾಕಷ್ಟು ಸುರಿದಿದೆ.
2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿ ಕುಸಿತ ಕಂಡಿತ್ತು. ಜೂನ್ ತಿಂಗಳ ಎರಡನೇ ವಾರದಿಂದ ಮತ್ತೆ ಕುಸಿತ ಕಂಡು, ಜುಲೈನಲ್ಲಿ 51 ಸಾವಿರ ಇತ್ತು. ಆಗಸ್ಟ್ ನಲ್ಲಿ ಹೊಸ ಅಡಿಕೆ 42 ಸಾವಿರಕ್ಕೆ ಕುಸಿದಿತ್ತು. ಅಕ್ಟೋಬರ್ ನಲ್ಲಿ ಮತ್ತಷ್ಟು ಚೇತರಿಕೆ ಕಂಡಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಅ.18ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಗರಿಷ್ಠ ಬೆಲೆ 49,559 ರೂ., ಕನಿಷ್ಠ 42,012 ಹಾಗೂ ಸರಾಸರಿ ಬೆಲೆ 47,431 ರೂ. ಇದೆ. ಬೆಟ್ಟೆ ಅಡಿಕೆ ಗರಿಷ್ಠ ಬೆಲೆ 31,536 ರೂ. ಇದೆ.