ದಾವಣಗೆರೆ: ನಡು ರಸ್ತೆ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಮಾಂಗಲ್ಯ ಸರ, ಶಾರ್ಟ್ ಚೈನ್ ಕಿತ್ತುಕೊಂಡು ಪರಾರಿಯಾದ ಆರೋಪಿಗಳನ್ನು ಪೊಲೀಸರು 24 ಗಂಟೆಯೊಳಗೆ ಬಂಧನ ಮಾಡಿದ್ದು, ಆರೋಪಿಗಳಿಂದ 1,78,000 ರೂ. ಬೆಲೆ ಬಾಳುವ ಬಂಗಾರದ ಆಭರಣಗಳು ವಶಕ್ಕೆ ಪಡೆಯಲಾಗಿದೆ.
ಜೆಹೆಚ್ ಪಟೇಲ್ ಬಡಾವಣೆಯ ನಿವಾಸಿ ಆಶಾ ಎಂಬುವವರು ಮಧ್ಯಾಹ್ನ ಮಗಳನ್ನು ಶಾಲೆಯಿಂದ ಕರೆದುಕೊಂಡು ಬರಲು ತೆರಳಿದ್ದಾಗ ಈ ಘಟನೆ ನಡೆದಿತ್ತು. ಬಡಾವಣೆಯ ‘ಬಿ’ ಬ್ಲಾಕ್ 2ನೇ ಮೇನ್, 1ನೇ ಕ್ರಾಸ್‌ನಲ್ಲಿ ಇಬ್ಬರು ಯುವಕರು ಬ್ಯಾಗ್ ಹಾಕಿಕೊಂಡು ನಿಂತಿದ್ದರು. ಬೈಕಿನಲ್ಲಿ ಹಿಂಬದಿಯಿಂದ ಬಂದು ಬೈಕ್‌ನ್ನು ಡಿಕ್ಕಿ ಹಿಡೆಯುವ ರೀತಿಯಲ್ಲಿ ಹೆದರಿಸಿ ಬಲವಂತವಾಗಿ ಕುತ್ತಿಗೆಯಲ್ಲಿದ್ದ ರೂ 1,05,000/- ಬೆಲೆಯ 15 ಗ್ರಾಂನ ಶಾರ್ಟ್ ಚೈನ್ ಮತ್ತು 37 ಗ್ರಾಂನ ಬಂಗಾರದ ಮಾಂಗಲ್ಯ ಸರದಲ್ಲಿ ಅಂದಾಜು ರೂ 1,40,000/- ಬೆಲೆಯ ಅಂದಾಜು 20 ಗ್ರಾಂನ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ ಎಂದು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್. ಎಂ. ಸಂತೋಷ್ ಮತ್ತು ಮಂಜುನಾಥ.ಜಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಗಳನ್ನೊಳಗೊಂಡ ಹಾಗೂ ಜಿಲ್ಲಾ ಅಪರಾಧ ವಿಭಾಗದವರ ತಂಡವನ್ನು ರಚಿಸಲಾಗಿತಗತು. ಈ ತಂಡವು ಕೃತ್ಯ ವರದಿಯಾದ 24 ಗಂಟೆಗಳೊಳಗೆ ಆರೋಪಿತರಾದ 1) ಅರುಣ್‌ಕುಮಾರ.ಬಿ (23) ವಾಸ ಕತ್ತಲಗೆರೆ ಗ್ರಾಮ, ಚನ್ನಗಿರಿ ತಾ, ದಾವಣಗೆರೆ ಜಿಲ್ಲೆ ಸ್ವಂತ ವಿಳಾಸ: ಎಪಿಎಂಸಿ ಹತ್ತಿರ, ತುಮ್ಮಿನಕಟ್ಟೆ ರಸ್ತೆ, ಹಲಗೇರಿ ಗ್ರಾಮ, ರಾಣೆಬೆನ್ನೂರು ತಾ, ಹಾವೇರಿ ಜಿಲ್ಲೆ ಮತ್ತು 2) ರಮೇಶ್ ಬಿ.ಎಸ್ (19), ವಾಸ ಕತ್ತಲಗೆರೆ ಗ್ರಾಮ, ಚನ್ನಗಿರಿ ತಾ|| ದಾವಣಗೆರೆ ಜಿಲ್ಲೆ ಇವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 1,78,000/-ರೂ ಬೆಲೆ ಬಾಳುವ ಬಂಗಾರದ ಸರ ಮತ್ತು ಬಂಗಾರದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಿಸಿದ 50,000/-ರೂ ಬೆಲೆ ಬಾಳುವ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.