ದಾವಣಗೆರೆ: ಸರಣಿ ಮನೆ ಕಳ್ಳತನ ಆರೋಪಿಗಳ ಬಂಧನ; 6.20 ಲಕ್ಷ ‌ಮೌಲ್ಯದ ಚಿನ್ನ, ಬೆಳ್ಳಿ ವಶ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ; ಜಿಲ್ಲೆಯ‌ ನ್ಯಾಮತಿ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯಾಮತಿಟೌನ್, ಸುರಹೊನ್ನೆ ಗಂಜೇನಹಳ್ಳಿ, ಚಟ್ನಹಳ್ಳಿ ಗ್ರಾಮಗಳಲ್ಲಿ ಜುಲೈ-ಆಗಸ್ಟ್ ತಿಂಗಳಿನಲ್ಲಿ ಸರಣಿ ಮನೆಗಳ್ಳತನಗಳು ನಡೆದಿದ್ದು, ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ 08 ಮನೆಗಳ್ಳತನ ಪ್ರಕರಣಗಳು ವರದಿಯಾಗಿರುತ್ತವೆ. ಈ ಪ್ರಕರಣದ ಆರೋಪಿಗಳ ಬಂಧನ ಮಾಡಿದ್ದು, ಆರೋಪಿಗಳಿಂದ 6.20.000/- ರೂ ಮೌಲ್ಯದ ಒಟ್ಟು 80.740 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿ ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣಗಳ ಪತ್ತೆ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಐಪಿಎಸ್ ನಿರ್ದೇಶನದಲ್ಲಿ ಎಎಸ್ಪಿ ವಿಜಯಕುಮಾರ ಎಂ ಸಂತೋಷ , ಜಿ ಮಂಜುನಾಥ ಹಾಗೂ ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜಿನಕೊಪ್ಪ ಮಾರ್ಗದರ್ಶನದಲ್ಲಿ ನ್ಯಾಮತಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರವಿ ಎನ್.ಎಸ್ ನ್ಯಾಮತಿ ಪೊಲೀಸ್ ಠಾಣೆ ನೇತೃತ್ವದಲ್ಲಿ, ಪಿಎಸ್ಐ ಜಯಪ್ಪನಾಯ್ಕ ಬಿ.ಎಲ್. ಮತ್ತು ಸಿಬ್ಬಂದಿ ಉಮೇಶ, ಮಂಜಪ್ಪ ಕೆ, ಮಹೇಶನಾಯ್ಕ, ಆನಂದ,ಪ್ರವೀಣ್ ಕುಮಾರ, ದೇವರಾಜ್ ಡಿ.ಎನ್, ಪ್ರಶಾಂತ ಇ.ಎಸ್ ಇವರನ್ನೊಳಗೊಂಡ ತಂಡವನ್ನು ರಚನೆ ಮಾಡಿ, ತನಿಖೆ ಕೈಗೊಂಡು, ಸದರಿ ತಂಡವು ಆರೋಪಿಗಳ ಬಂಧನ ಮಾಡಿದೆ.

ಆರೋಪಿಗಳಾದವ ರಾಮ @ ಬುಡ್ಡರಾಮ (40) ಕೂಲಿ ಕೆಲಸ, ಚಿಕ್ಕಬೆನ್ನೂರು ಗ್ರಾಮ, ಸಂತೆಬೆನ್ನೂರು ಹೋಬಳಿ, ಚನ್ನಗಿರಿ ತಾಲ್ಲೂಕು ಮತ್ತು ಸಂತೋಷ ಟಿ(48), ಕೂಲಿ ಕೆಲಸ, ಮಾವಿನಕಟ್ಟೆ ಗ್ರಾಮ, ಚನ್ನಗಿರಿ ತಾಲ್ಲೂಕು ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದಾಗ ಧನಂಜಯ ಹಾಗೂ ಮುಖೇಶ್ ಇವರಿಬ್ಬರನ್ನು ಸೇರಿಸಿಕೊಂಡು 04 ಜನರ ತಂಡ ಮಾಡಿಕೊಂಡು ಜುಲೈ-ಆಗಸ್ಟ್ ತಿಂಗಳಲ್ಲಿ ನ್ಯಾಮತಿ ಟೌನ್. ಸುರಹೊನ್ನೆ, ಗಂಜೇನಹಳ್ಳಿ, ಚಟ್ನಹಳ್ಳಿ ಗ್ರಾಮಗಳಲ್ಲಿ ಮನೆಗಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿರುತ್ತಾರೆ.

ಆರೋಪಿತರ ಹಿನ್ನೇಲೆ: ಆರೋಪಿತ ರಾಮ @ ಬುಡ್ಡರಾಮನ ಮೇಲೆ ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು, ಹೊಳಲ್ಕೆರೆ, ಚಿತ್ರದುರ್ಗ ಗ್ರಾಮಾಂತರ ಠಾಣೆ, ಶಿವಮೊಗ್ಗ ಜಿಲ್ಲೆಯ ಆನವಟ್ಟಿ, ಭದ್ರಾವತಿ ಟೌನ್, ದಾವಣಗೆರೆ ಜಿಲ್ಲೆಯ ದಾವಣಗೆರೆ ಗ್ರಾಮಾಂತರ, ಹದಡಿ, ಹರಿಹರ ಗ್ರಾಮಾಂತರ, ಮಲೇಬೆನ್ನುರು, ಮಾಯಕೊಂಡ, ಚನ್ನಗಿರಿ, ಸಂತೇಬೆನ್ನುರು, ಪೊಲೀಸ್ ಠಾಣೆಗಳಲ್ಲಿ ಒಟ್ಟು 25 ಕಳ್ಳತನ ಪ್ರಕರಣಗಳು ದಾಖಲಾಗಿರುತ್ತವೆ.

ಆರೋಪಿತರುಗಳಿಂದ 08 ಮನೆಗಳ್ಳತನ ಪ್ರಕರಣಗಳನ್ನು ಪತ್ತೆ ಮಾಡಿ ಪ್ರಕರಣಗಳಿಗೆ ಸಂಬಂಧಿಸಿದ ಸುಮಾರು 6.20.000/- ರೂ ಮೌಲ್ಯದ ಒಟ್ಟು 80.740 ಗ್ರಾಂ ಚಿನ್ನ ಹಾಗೂ 810 ಗ್ರಾಂ ಬೆಳ್ಳಿ ಆಭರಣಗಳನ್ನು ಅಮಾನತ್ತುಪಡಿಸಿಕೊಂಡಿರುತ್ತದೆ. ಬಂಧಿತ ಆರೋಪಿಗಳಾದ ರಾಮ ಮತ್ತು ಸಂತೋಷ ಇವರನ್ನು ಹಾಲಿ ನ್ಯಾಯಾಂಗ ಬಂಧನದಲ್ಲಿಸಿರುತ್ತದೆ.‌ಉಳಿದ ಆರೋಪಿತರ ಪತ್ತೆಕಾರ್ಯ ಮುಂದುವರೆದಿರುತ್ತದೆ.‌ಈ ಸರಣಿ ಮನೆಕಳ್ಳತನ ಪ್ರಕರಣಗಳಿಂದ ನ್ಯಾಮತಿ ತಾಲ್ಲೂಕಿನಲ್ಲಿ ಜನರು ಭಯಗ್ರಸ್ಥರಾಗಿದ್ದು, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಾರ್ಯಾಚರಣೆ ಕೈಗೋಂಡಿರುತ್ತದೆ.

ಪ್ರಾರಂಭದಲ್ಲಿ ಸರಣಿ ಮನೆಗಳ್ಳತ ಪ್ರಕರಣಗಳಲ್ಲಿ ಸಿಸಿಟಿವಿ ಸೇರಿದಂತೆ ಯಾವುದೇ ಸಾಕ್ಷಿಗಳು ದೊರೆಯದೇ ಇದ್ದು, ಪೊಲೀಸರ ಚಾಣಾಕ್ಷತೆ ಹಾಗು ಸೂಕ್ಷ್ಮತೆ ಮೇಲ್ಕಂಡ ಪ್ರಕರಣಗಳಲ್ಲಿನ ಆರೋಪಿತರ ಪತ್ತೆಕಾರ್ಯದಲ್ಲಿ ನ್ಯಾಮತಿ ಪೊಲೀಸರು ಯಾಶಸ್ವಿಯಾಗಿದ್ದಾರೆ. ಇದರಿಂದ ನ್ಯಾಮತಿ ತಾಲ್ಲೂಕಿನ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ, ಎಂ ಸಂತೋಷ ಮಂಜುನಾಥ ನ್ಯಾಮತಿ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳ ಪತ್ತೆ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *