ದಾವಣಗೆರೆ: ಪೈಪ್ಸ್, ಸ್ಪಿಂಕ್ಲರ್ ತಯಾರಿಕಾ ಘಟಕದಲ್ಲಿ ತಾಮ್ರದ ತಂತಿ ಮತ್ತು ಎಲೆಕ್ಟ್ರಿಕ್ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಮೂವರು ಆರೋಪಿಗಳನ್ನು ಬಂಧನ ಮಾಡಿದ್ದು, 12 ಲಕ್ಷದ ಮೌಲ್ಯದ ತಾಮ್ರದ ತಂತಿ ಮತ್ತು ಎಲೆಕ್ಟ್ರಿಕ್ ಸಾಮಗ್ರಿಗಳು ಹಾಗೂ ಕೃತ್ಯಕ್ಕೆ ಬಳಸಿದ ಓಮಿನಿ ಮತ್ತು 02 ಬೈಕ್ ಗಳ ಜಪ್ತಿ ಮಾಡಲಾಗಿದೆ.
ದಿನಾಂಕ:20-08-2024 ರಂದು ರಾತ್ರಿ 10.00 ಗಂಟೆಗೆ ಕೊಟ್ರೇಶ್ ನಾಯ್ಕ ಅವರಿಗೆ ಸೇರಿದ ಹರಿಹರ ತಾ: ಹನಗವಾಡಿ ಇಂಡಸ್ಟ್ರಿಯಲ್ ಏರಿಯಾದ ಗ್ರೀನ್ ರಾಯಲ್ ಪೈಪ್ಸ್ ಮತ್ತು ಡ್ರಿಪ್ ಹಾಗು ಸ್ಪೀಂಕ್ಲರ್ ತಯಾರಿಕಾ ಘಟಕದಲ್ಲಿ ಮಿಷನರಿಗೆ ಬಳಸಿದ್ದ ಪವರ್ ಸಪ್ಲೈ ಮತ್ತು ಕಾಪರ್ ಕೇಬಲ್ ಹಾಗೂ ಸಲಕರಣೆಗಳನ್ನು ಕಳ್ಳತನ ಬಗ್ಗೆ ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿ ಪತ್ತೆ ಕಾರ್ಯದಲ್ಲಿ ಎಎಸ್ಪಿ ವಿಜಯ್ ಕುಮಾರ್ ಸಂತೋಷ , ಮಂಜುನಾಥ ಜಿ. ಡಿವೈಎಸ್ಪಿ ಬಸವರಾಜ.ಬಿ.ಎಸ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಸುರೇಶ ಸಗರಿ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ ಐ ಮಂಜುನಾಥ ಎಸ್. ಕುಪ್ಪೇಲೂರು ಸಿಬ್ಬಂದಿಗಳಾದ ಸರಳ ತಿಪ್ಪೇಸ್ವಾಮಿ, ನಾಗರಾಜ. ರಾಮಚಂದ್ರ‍್ರಪ್ಪ, ಕರಿಯಪ್ಪ, ರಮೇಶ, ದಾದಾಪೀರ್, ನೀಲಮೂರ್ತಿ, ಸತೀಶ, ಲಿಂಗರಾಜ, ಅರ್ಜುನ ರಾಯಲ್, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಗಂಗಾಧರ, ಪ್ರಸನ್ನಕಾಂತ, ಸುರೇಶ, ಅರ್ಜುನ್ ನಂದ್ಯಾಲ, ಋಷಿರಾಜ, ನಾಗರಾಜ, ರಾಮಾಂಜನೇಯ, ಸತೀಶ, ದ್ವಾರಕೇಶ, ಹನುಮಂತ, ಸಿದ್ಧಪ್ಪ , ಮುರುಳಿ ಹಾಗು ಜಿಲ್ಲಾ ಪೊಲೀಸ್ ಕಛೇರಿಯ ಮಂಜುನಾಥ ಎಸ್. ಕಲ್ಲೆದೇವರ ಪಿ.ಎಸ್.ಐ, ಸಿಬ್ಬಂದಿಯವರಾದ-ಅಖ್ತರ್ ಎಸ್ ಎಂ ಮತ್ತು ನಾಗರಾಜ ಕುಂಬಾರ, ವೀರೇಶ ವಿ, ಶಾಂತರಾಜ, ಹಾಗು ಜಿಲ್ಲಾ ಪೊಲೀಸ್ ಶ್ವಾನದಳದ ಸಿಬ್ಬಂದಿಯವರನ್ನೊಳಗಡ ತಂಡವು ಪತ್ತೆ ಕಾರ್ಯ ನಡೆಸಿ ಆರೋಪಿಗಳಾದ ಹರಿಹರ ನಗರದ- ಎ1. ಸೈಯದ್ ನೂರುದ್ದೀನ್ , ಎ-2.ಮೊಹ್ಮದ್ ಆಸೀಫ್ , ಎ3. ಇರ್ಷದ್ ಸಂಬಂಧಿಸಲಾಗಿದೆ.
8 ಲಕ್ಷ ಮೌಲ್ಯದ ತಾಮ್ರದ ತಂತಿ ಮತ್ತು ಎಲೆಕ್ಟ್ರಿಕ್ ಸಾಮಗ್ರಿಗಳು ಹಾಗು ಕೃತ್ಯಕ್ಕೆ ಬಳಸಿದ ಒಟ್ಟು ಸುಮಾರು 4 ಲಕ್ಷ ರೂ ಮೌಲ್ಯದ ಓಮಿನಿ ಮತ್ತು 02 ಬೈಕುಗಳನ್ನು ವಶಕ್ಕೆ ವಶಪಡಿಸಿಕೊಂಡಿದ್ದು, ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ತನಿಖೆ ಮುಂದುವರೆದಿದೆ. ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಅಧಿಕಾರಿ ಮತ್ತು ಸಿಬ್ಬಂದಿಗೆಳಿಗೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
ಆರೋಪಿತರ ಹಿನ್ನೆಲೆ : ಆರೋಪಿತ ಸೈಯದ್ ನೂರುದ್ದೀನ್ ಈತನ ಮೇಲೆ ಹಾಲಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಸೇರಿದಂತೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ 2016 ರಲ್ಲಿ , ಹರಿಹರ ನಗರ ಠಾಣೆಯಲ್ಲಿ 2010 ರಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ ಹಾಗೂ ಆರೋಪಿತ ಮೊಹ್ಮದ್ ಆಸೀಫ್ ಈತನ ಮೇಲೆ ಹಾಲಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ಸೇರಿದಂತೆ 2021 ರಲ್ಲಿ ಹರಿಹರ ನಗರ ಠಾಣೆ, 2022 ರಲ್ಲಿ ಬಸವಾ ಪಟ್ಟಣ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.