ದಾವಣಗೆರೆ: ಮಚ್ಚಿನಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ ಪ್ರಕರಣ ನಡೆದು ಕೇವಲ 6 ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧನ ಮಾಡಿದ್ದಾರೆ. ಮಳೆ ನಡುವೆ ಕೊಲೆ ಆರೋಪಿಗಳ ಪತ್ತೆ ಮಾಡುವಲ್ಲಿ ತುಂಗಾ-2 ಶ್ವಾನ ಯಶಸ್ವಿಯಾಗಿದೆ.
ಸೋಮವಾರ ರಾತ್ರಿ (ಜು.15) ರಾತ್ರಿ 9-30 ಗಂಟೆ ಸುಮಾರಿಗೆ ಸಂತೇಬೆನ್ನೂರು ಗ್ರಾಮದ ಸಂತೇಬೆನ್ನೂರು-ದಾವಣಗೆರೆ ಮುಖ್ಯರಸ್ತೆಯ ಹಿಂದುಸ್ಥಾನ ಪೆಟ್ರೋಲಿಯಂ ಬಂಕ್ ಎದುರಿನ ರಸ್ತೆಯಲ್ಲಿ ಯಾರೋ ದುಷ್ಕರ್ಮಿಗಳು ಸಂತೇಬೆನ್ನೂರು ಗ್ರಾಮದ ಸಂತೋಷ (36) ಎಂಬ ಯುವಕನನ್ನು ಬರ್ಬರವಾಗಿ ನಡು ರಸ್ತೆಯಲ್ಲಿಯೇ ಹತ್ಯೆ ಮಾಡಿದ್ದರು. ಈ ವಿಷಯ ಸಂತೇಬೆನ್ನೂರು ಗ್ರಾಮದಲ್ಲಿ ಕೆಲವು ಗಂಟೆಗಳ ಕಾಲ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಘಟನೆ ನಡೆದ ಕೆಲವೇ ಕ್ಷಣದಲ್ಲಿ ಹೆದ್ದಾರಿ ಗಸ್ತು ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಗಳು ಕೊಲೆ ನಡೆದ ಸ್ಥಳಕ್ಕೆ ಆಗಮಿಸಿದ್ದು, ಪೊಲೀಸ್ ಸಿಬ್ಬಂದಿಗಳು ಕೊಲೆಯಾದ ಸಂತೋಷನನ್ನು ಉಪಚರಿಸಿದಾಗ ಮೃತಪಟ್ಟಿರುವುದಾಗಿ ತಿಳಿದು ಬಂದಿರುತ್ತದೆ. ಸದರಿ ಕೊಲೆ ಪ್ರಕರಣದ ಆರೋಪಿತರ ಪತ್ತೆಗಾಗಿ ಕಾರ್ಯಾ ಪ್ರವೃತ್ತರಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯ ಕುಮಾರ್ ಸಂತೋಷ್ ಹಾಗೂಮಂಜುನಾಥ ಜಿ ರವರು ಮತ್ತು ಚನ್ನಗಿರಿ ಪೊಲೀಸ್ ಉಪಾಧೀಕ್ಷಕ ರುದ್ರಪ್ಪ ಎಸ್ ಉಜ್ಜನಕೊಪ್ಪ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಹಾಗೂ ಅಪರಾಧ ಪತ್ತೆ ಶ್ವಾನ (ಕ್ರೈಂ ಡಾಗ್) “ತುಂಗಾ-2” ದೊಂದಿಗೆ ಶ್ವಾನದಳ ಹಾಗೂ ಸುಕೋ ತಂಡದೊಂದಿಗೆ ಕಾರ್ಯಾಚರಣೆ ಆರಂಭಿಸಲಾಯಿತು.
ಲಭ್ಯವಿರುವ ಸಾಕ್ಷ್ಯಾಧಾರಗಳೊಂದಿಗೆ ಕಾರ್ಯಪ್ರವೃತ್ತರಾಗಿ ಘಟನೆ ನಡೆದ ಕೆಲವೇ ಗಂಟೆಯಲ್ಲಿಯೇ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿ ಚನ್ನಗಿರಿಯ ತಾಲೂಕಿನ ಚನ್ನಾಪುರ ಗ್ರಾಮ ರಂಗಸ್ವಾಮಿ (32) ಹಾಗೂ ಕೃತ್ಯಕ್ಕೆ ಬಳಸಿದ ಹರಿತವಾದ ಮಚ್ಚಿನೊಂದಿಗೆ ಬಂಧನ ಮಾಡಲಾಗಿದೆ.
ಕೊಲೆ ಪ್ರಕರರಣದ ಆರೋಪಿ ಹೆಚ್ಚಿನ ವಿಚಾರಣೆ ಮಾಡಿದ್ದಾಗ ಮೃತನು ಕೊಲೆ ಆರೋಪಿಯ ಹೆಂಡತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂದು ಕೋಪಗೊಂಡು ಮೃತ ಸಂತೇಬೆನ್ನೂರು ಗ್ರಾಮದ ಸಂತೋಷ ನನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ.
ಸಂತೋಷನನ್ನು ಕೊಲೆ ಮಾಡಿದ ನಂತರ ತನ್ನ ಹೆಂಡತಿಯನ್ನು ಕೊಲೆ ಸಂಚು ರೂಪಿಸಿರುವ ವಿಷಯ ಬೆಳಕಿಗೆ ಬಂದಿರುತ್ತದೆ. ಪೊಲೀಸ್ರು ಕೂಡಲೇ ಕಾರ್ಯ ಪ್ರವೃತ್ತರಾಗಿ ಆರೋಪಿಯನ್ನು ಬಂಧಿಸಿದ್ದಾರೆ. ಇದರಿಂದ ಜರುಗಬಹುದಾಗಿದ್ದ ಇನ್ನೊಂದು ಕೊಲೆ ತಡೆದಂತಾಗಿರುತ್ತದೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಅಣ್ಣ ನಾಗರಾಜ ದೂರು ನೀಡಿದ ಹಿನ್ನಲೆಯಲ್ಲಿ ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಧಾರಕಾರವಾಗಿ ಸುರಿಯುತ್ತಿರುವ ಮಳೆಯ ಮದ್ಯೆಯು ದಾವಣಗೆರೆ ಜಿಲ್ಲಾ ಪೊಲೀಸ್ ಮತ್ತು “ತುಂಗಾ ಶ್ವಾನ” ದಳದ ಸಿಬ್ಬಂದಿಗಳಾಗಿರುವ ಶಫಿವುಲ್ಲಾ ಎಂ.ಡಿ ದರ್ಗಾನಾಯ್ಕ ಆರೋಪಿತನ ಚಲನವಲನ ಗುರುತಿಸುವಲ್ಲಿ ಮಾಡಿದ ಕಾರ್ಯಶ್ಲಾಘನೀಯವಾಗಿರುತ್ತದೆ.
ಕೊಲೆ ಆರೋಪಿತನನ್ನು ಕೃತ್ಯ ನಡೆದ ಕೆಲವೇ ಕೆಲವು ಗಂಟೆಗಳಲ್ಲಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಬಂಧಿಸಿದ್ದು ಅಲ್ಲದೇ ಸಂಭವಿಸಬಹುದಾಗಿದ್ದ ಇನ್ನೊಂದು ಕೊಲೆಯನ್ನು ತಪ್ಪಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳಾದ ಸಂತೇಬೆನ್ನೂರು ವೃತ್ತ ನಿರೀಕ್ಷಕ ಲಿಂಗನಗೌಡ ನೆಗಳೂರು, ಸಂತೇಬೆನ್ನೂರು ಠಾಣೆ ಪಿ.ಎಸ್.ಐ ಗಳಾದ ರೂಪಾತೆಂಬದ್ & ಚನ್ನವೀರಪ್ಪ ಹಾಗೂ ಸಿಬ್ಬಂದಿಗಳಾದ ರವಿ, ರಾಘವೇಂದ್ರ, ಕಣ್ಣಪ್ಪ, ಕುಮಾರ ನಾಯ್ಕ, ನಾಗಭೂಷಣ, ಸತೀಶ ಜಿ.ಆರ್, ರುದ್ರೇಶ್ ಎಂ., ಪರಶುರಾಮ ಚಾಲಕರುಗಳಾದ ರಘು, ರವಿ, ಸೋಮಶೇಖರ್, ಶ್ವಾನದಳದ ಶಫಿವುಲ್ಲಾ ಎಂ.ಡಿ, ದರ್ಗಾನಾಯ್ಕ ಇವರನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.