Advertisement

ದಾವಣಗೆರೆ: ಹಗಲು ವೇಳೆಯೇ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ; 1ಲಕ್ಷ ಮೌಲ್ಯದ ಒಂದು ಲ್ಯಾಪ್ ಟಾಪ್, 3 ಮೊಬೈಲ್‌ ವಶ

ದಾವಣಗೆರೆ: ಮನೆಯಲ್ಲಿ ಯಾರು ಇಲ್ಲದ‌ ವೇಳೆ ಹೊಂಚು ಹಾಕಿ ಹಗಲು ವೇಳೆಯೇ ಮನೆ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 1 ಲಕ್ಷ ಮೌಲ್ಯದ 3 ಮೊಬೈಲ್ ಮತ್ತು ಒಂದು ಲ್ಯಾಪ್ ಟಾಪ್ ವಶಕ್ಕೆ ಪಡೆಯಲಾಗಿದೆ.

ನಗರದ ಬಸವರಾಜಪೇಟೆ ಬಸವರಾಜ್ ಎಂಬುವವರು ಮಧ್ಯಾಹ್ನ 2 ಗಂಟೆಗೆ 15 ಸಾವಿರ ಬೆಲೆ ಬಾಳುವ ಸ್ಮಾರ್ಟ್ ಫೋನ್ ಮನೆಯಲ್ಲಿ ಚಾರ್ಜ ಗೆ ಹಾಕಿ ಹೊರಗಡೆ ಹೋಗಿದ್ದರು. ಈ ವೇಳೆ ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದಾವಣಗೆರೆ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣದಾಖಲಿಸಿಕೊಂಡ ಪೊಲೀಸರು, ಮಾಲು ಪತ್ತೆ ಮಾಡಲು ಎಎಸ್ಪಿಗಳಾದ ವಿಜಯಕುಮಾರ ಎಂ ಸಂತೋಷ, ಮಂಜುನಾಥ ಜಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪಿಎಸ್ ಐ ಜಿ ನಾಗರಾಜ , ಸಿಬ್ಬಂದಿಗಳಾದ ಫಕೃದ್ದೀನ್ ಅಲಿ, ಸುರೇಶ್ ಟಿ, ಪವನಕುಮಾರ ಹಾಗೂ ಹನುಮಂತಪ್ಪ ಕುರುವತ್ತಿ, ಪೂರ್ವಾಚಾರಿ ಅವರನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು .

ಈ ತಂಡ ಖಚಿತ ಮಾಹಿತಿ ಮೇರೆಗೆ ಮನೆಯಲ್ಲಿ ಯಾರೋ ಇಲ್ಲದ ಸಮಯದಲ್ಲಿ ಹಗಲು ವೇಳೆಯಲ್ಲಿಯೇ ಕಳ್ಳತನ ಮಾಡುವ ಆರೋಪಿಗಳಾದ 1) ಚಂದ್ರಶೇಖರ @ ಚಂದ್ರ, 22 ವರ್ಷ, ವಾಸ ದಾವಣಗೆರೆ, 2) ಶಿವಕುಮಾರ್ @ ಶಿವು, 44 ವರ್ಷ, ವಾಸ: ದಾವಣಗೆರೆ ಇವರುಗಳನ್ನು ಬಂಧಿಸಿ ವಿಚಾರಣೆ ಮಾಡಿದಾಗ ಆರೋಪಿತರು ದಾವಣಗೆರೆ ಬಸವರಾಜಪೇಟೆ, ಮಹಾರಾಜಪೇಟೆ ಹಾಗೂ ಇಸ್ಲಾಂಪೇಟೆಯಲ್ಲಿ ಕಳ್ಳತನ ಮಾಡಿದ ಬಗ್ಗೆ ತಪ್ಪೋಪ್ಪಿಕೊಂಡಿದ್ದಾರೆ. ಈ ವೇಳೆ ಕಳ್ಳತನ ಮಾಡಿದ 03 ಸ್ಮಾರ್ಟ ಫೋನ್ ಗಳು ಹಾಗೂ 01 ಲ್ಯಾಪ್ ಟಾಪ್ ಒಟ್ಟು 01 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪತ್ತೆ ಕಾರ್ಯಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

Dvgsuddi: Dvgsuddi.com is a live Kannada news portal. Kannada news online. political, information, crime, film, Sports News in Kannada
Recent Posts