ದಾವಣಗೆರೆ: ತಾಲ್ಲೂಕಿನ ಚಿನ್ನಸಮುದ್ರ ಗ್ರಾಮದಿಂದ ಹೆಬ್ಬಾಳ ಗ್ರಾಮಕ್ಕೆ ಹೋಗುವ ಹೆಬ್ಬಾಳ ಹೆದ್ದಾರಿ 48 ರಲ್ಲಿ ಒಣ ಗಾಂಜಾ ಸಾಗಿಸುತ್ತಿದ್ದ ಆರೋಪಿಯನ್ನು ಅಬಕಾರಿ ಇಲಾಖೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಅಬಕಾರಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ ಕಡ್ಡಿ, ಹೂವು, ಬೀಜ ಮಿತ್ರಿತ 794 ಗ್ರಾಂ ಒಣ ಗಾಂಜಾ, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಆರೋಪಿ ಚಿನ್ನಸಮುದ್ರ ಗ್ರಾಮದ ಸೇವಾನಾಯ್ಕ (57) ಆಗಿದ್ದು, ಎನ್ ಡಿಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ದಾವಣಗೆರೆ ಅಬಕಾರಿ ಉಪ ಆಯುಕ್ತ ಬಿ. ಶಿವ ಪ್ರಸಾದ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಉಪ ವಿಭಾಗದ ಉಪ ಅಧೀಕ್ಷಕ ಎಸ್. ಆರ್ . ಮುರುಡೇಸ್ ನೇತೃತ್ವದಲ್ಲಿ ಅಬಕಾರಿ ನಿರೀಕ್ಷಕಿ ಸವಿತಾ, ಉಪ ನಿರೀಕ್ಷಕ ಮೂರ್ತಿ, ಪೇದೆಗಳಾದ ದಿಳ್ಳೆಪ್ಪ ರ್ಯಾವಳ್ಳರ, ಸುರೇಶ್ ಉತ್ತನಾಳ, ಮರುಳ ಸಿದ್ದಪ್ಪ ಅವರನ್ನು ಒಳಗೊಂಡ ತಂಡ ದಾಳಿ ಮಾಡಿದೆ.



