ದಾವಣಗೆರೆ: ಕಳ್ಳತನಕ್ಕೆ ಬಂದವರು ಮನೆ ಮಾಲೀಕನ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದವರನ್ನು ನೆರೆಯ ಮನೆಯವರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರಿನ ದುರ್ಗಾಂಬಿಕ ಬಡವಾಣೆಯ ಮನೆಯೊಂದರಲ್ಲಿ ನಡೆದಿದೆ.
ರಾತ್ರಿ ಮನೆಗೆ ನುಗ್ಗಿದ ಕಳ್ಳರು, ಮನೆ ಬೀಗ ಮುರಿದು ಒಳ ಪ್ರವೇಶಿಸಿದ್ದರು. ಈ ಬಗ್ಗೆ ನೆರೆಯ ಮನೆಯರು ಮಾಲೀಕರಿಗೆಆಅಹಿತಿ ನೀಡಿದ್ದರು. ತಕ್ಷಣವೇ ಮನೆಗೆ ಬಂದ ಮಾಲೀಕನ ಮೇಲೆ ಮೇಲೆ ದುಷ್ಕರ್ಮಿಗಳು ಕಬ್ಬಿಣದ ಸರಳಿನಿಂದ ತಲೆಗೆ ಹೊಡೆದು ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಆರೋಪಿಗಳಾದ ಭದ್ರಾವತಿಯ ತೌಸೀಫ್ ಹಾಗೂ ರಫೀಕ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮನೆಯ ಮಾಲೀಕ ಕೆ.ನಟರಾಜ್ ಈಚೆಗೆ ಹೊಸ ಮನೆ ಗೃಹ ಪ್ರವೇಶ ನಡೆಸಿದ್ದರು. ಈ ಹಿಂದೆ ವಾಸವಿದ್ದ ದುರ್ಗಾಂಬಿಕ ಬಡಾವಣೆ ಮನೆಗೆ ಬೀಗ ಹಾಕಿದ್ದರು. ರಾತ್ರಿ 11.30ರ ಸಮಯದಲ್ಲಿ ಇಬ್ಬರು ಕಳ್ಳರು ಇಂಟರ್ ಲಾಕ್ ಮುರಿದು ಒಳ ಪ್ರವೇಶಿದ್ದಾರೆ. ಆಗ ನೆರೆಯ ಮನೆಯವರು ಮನೆಯೊಳಗೆ ಯಾರೋ ಓಡಾಡುವ ಸದ್ದು ಕೇಳುತ್ತಿದೆ ಎಂದು ನಟರಾಜ್ ಅವರಿಗೆ ಕರೆ ಮಾಡಿದ್ದಾರೆ.
ತಕ್ಷಣ ಆಗಮಿಸಿ ನೆರೆಯವರ ಸಹಾಯದಿಂದ ಮನೆ ಒಳಗೆ ಹೋದಾಗ ಇಬ್ಬರು ಕಳ್ಳರು ಬೀರುವಿನ ಮರೆಯಲ್ಲಿ ಬಚ್ಚಿಟ್ಟುಕೊಂಡಿದ್ದರು. ಹಿಡಿಯಲು ಮುಂದಾದ ನಟರಾಜ್‌ಗೆ ಒಬ್ಬ ಕಳ್ಳ ಕಬ್ಬಿಣದ ಸರಳಿನಿಂದ ಬಿರುಸಿನಿಂದ ಹೊಡೆದಿದ್ದಾನೆ. ಹಣೆ ಭಾಗದಲ್ಲಿ ತೀವ್ರ ಗಾಯವಾಗಿ ರಕ್ತ ಸೋರಿದೆ. ತಕ್ಷಣ ತಕ್ಷಣ ನೆರೆಹೊರೆಯವರು ಕಳ್ಳರನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದಾರೆ. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.