ದಾವಣಗೆರೆ ಓಬಜ್ಜಿಹಳ್ಳಿ ಗ್ರಾಮದ ಬಳಿ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿಯನ್ನು ಜಿಲ್ಲಾ ಪೊಲೀಸರು ತನಿಖೆ ಕೈಗೊಂಡು ಕೇವಲ 48 ಗಂಟೆಗಳಲ್ಲಿ ಬಂಧಿಸಿದ್ದಾರೆ. ಕೊಲೆಯಾದ ಸಂದೀಪ ಮತ್ತು ಆರೋಪಿ ನಡುವೆ ಹಣಕಾಸಿನ ವಿಚಾರದಲ್ಲಿ ಜಗಳ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ.
ಎಸ್ಪಿಎಸ್ ನಗರದ ಮೃತ ಸಂದೀಪ ಪತ್ನಿ ಭೂಮಿಕಾ, ಮನೆಯಿಂದ ಬೈಕ್ ತೆಗೆದುಕೊಂಡು ಹೋದ ತಮ್ಮ ಪತಿ ಓಬಜ್ಜಿಹಳ್ಳಿ ರಸ್ತೆಯ ಬಳಿ ಚುಚ್ಚಿ ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆರೋಪಿ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಹಾಗೂ ಪೊಲೀಸ್ ಅಧೀಕ್ಷಕ ವಿಜಯ್ ಕುಮಾರ್ ಸಂತೋಷ್, ಹಾಗೂ ಶ್ರೀ ಮಂಜುನಾಥ ಮತ್ತು ದಾವಣಗೆರೆ ಗ್ರಾಮಾಂತರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಶಾಂತ್ ಸಿದ್ದನಗೌಡರ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್ ನೇತೃತ್ವದಲ್ಲಿ ಠಾಣಾ ಪಿಎಸ್‌ಐ ಜೋವಿತ್ ರಾಜ್, ಎಎಸ್ ಐ ನಾರಪ್ಪ, ಸಿಬ್ಬಂದಿಗಳಾದ ಜಗದೀಶ್, ದೇವೇಂದ್ರನಾಯ್ಕ, ನಾಗಭೂಷಣ್, ಮಂಜುನಾಥ, ಅಣ್ಣಯ್ಯ, ಮಹೇಶ್, ವಿಶ್ವನಾಥ, ಮಹಮ್ಮದ್ ಯುಸುಫ್ ಅತ್ತರ್, ವೀರೇಶ್ ಅರನ್ನೊಳಗೊಂಡ ತಂಡ ಆರೋಪಿಯನ್ಬು ಬಂಧಿಸಿದೆ.
ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡು ಕೊಲೆ ನಡೆದ ಕೇವಲ 48 ಗಂಟೆಗಳಲ್ಲಿ ಕೊಲೆ ಮಾಡಿದ್ದ ಆರೋಪಿತ ಮನೋಹರ್ ಪಿ., 25ವರ್ಷ, ವಾಸ: ಎಸ್.ಪಿ.ಎಸ್. ನಗರ ದಸ್ತಗಿರಿ ಮಾಡಿದ್ದು, ತನಿಖೆ ವಿಚಾರಣೆ ವೇಳೆಯಲ್ಲಿ ಆರೋಪಿತನು ಹಣಕಾಸಿನ ವಿಚಾರದಲ್ಲಿ ಮೃತ ಸುದೀಪನನ್ನು ಕೊಲೆ ಮಾಡಿರುವುದಾಗಿ ತಿಳಿದು ಬಂದಿರುತ್ತದೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಈ ಕೊಲೆ ಪ್ರಕರಣದ ಆರೋಪಿತನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ ಶ್ಲಾಘಿಸಿದ್ದಾರೆ.