ದಾವಣಗೆರೆ: ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ ಮಾಡಿದ್ದು, ಆರೋಪಿಯಿಂದ 74,000 ರೂ. ಬೆಲೆ ಬಾಳುವ 13.45 ಗ್ರಾಂ ತೂಕದ ಬಂಗಾರದ ಆಭರಣ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆಯ ಸರಸ್ವತಿ ನಗರದ ಚಿದಾನಂದ ಗೌಡ (38) ತಮ್ಮ ಸೋದರ ಸಂಬಂಧಿ ಮದುವೆಗೆ ಶಾಮನೂರು ರಸ್ತೆಯಲ್ಲಿರುವ ಬಾಪೂಜಿ ಬ್ಯಾಂಕ್ ಸಮುದಾಯ ಭವನಕ್ಕೆ ತೆರಳಿದ್ದರು. ಕುಂಟುಂಬ ಸಮೇತ ಮುದುವೆಗೆ ಹೋಗಿದ್ದು, ಉಳಿದುಕೊಳ್ಳಲು ರೂಮ್ ಕೊಟ್ಟಿದ್ದರು. ಬ್ಯಾಗ್‌ಗಳನ್ನು ರೂಮಿನಲ್ಲಿಟ್ಟು ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆ ಕಾರ್ಯಕ್ರಮ ಮುಗಿದ ನಂತರ ಹೊರಡಲು ರೂಮಿಗೆ ಬಂದು ಸಮಾನುಗಳನ್ನು ಜೋಡಿಸುತ್ತಿರುವಾಗ ಬ್ಯಾಗಿನಲ್ಲಿಟ್ಟಿದ್ದ 10 ಗ್ರಾಂ ತೂಕದ 2 ಜೊತೆ ಬಂಗಾರದ ಕಿವಿ ಓಲೆ, ಅರಮದರ ಬೆಲೆ 55,000 , 2) 15 ಗ್ರಾಂ ತೂಕದ ಬಂಗಾರದ ಸರ ಬೆಲೆ 75,000 ರೂ. ಕಾಣಿಸಲಿಲ್ಲ . ಆಗ ಚೌಟ್ರಿಯಲ್ಲಿದ್ದ ಸಿ.ಸಿ.ಟಿವಿ ಪರಿಶೀಲಿಸಲಾಗಿ ಯಾರೋ ಒಬ್ಬ ವ್ಯಕ್ತಿ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ನಕಲಿ ಕೀ ಬಳಿಸಿ ರೂಂ ಓಪನ್ ಮಾಡಿ ಒಳಗೆ ಹೋಗಿ ಬಂದಿರುವುದು ಕಂಡುಬಂದಿದ್ದು, ಈ ವ್ಯಕ್ತಿ ಬಂಧಿಸುವಂತೆ ನೀಡಿದ ದೂರಿನ ಮೇರೆಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್.ಎಂ. ಸಂತೋಷ್ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಪಿ.ಎಸ್.ಐ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದು,ತಂಡವು ಆರೋಪಿತ ಕಿರಣ್ ನಾಯ್ಕ ಆರ್ (26) ಮಸಾಲೆ ವ್ಯಾಪಾರ, ವಾಸ- ಶಾಂತಿನಗರ ದಾವಣಗೆರೆ, ಪತ್ತೆ ಮಾಡಿದ್ದು, ಆರೋಪಿತನಿಂದ ವಿದ್ಯಾನಗರ ಠಾಣೆಯಲ್ಲಿ ಈಗಾಗಲೇ ಇನ್ನೊಂದು ಕಳ್ಳತನ ಪ್ರಕರಣ ದಾಖಲಾಗಿತ್ತು.
ಒಟ್ಟು 74 ಸಾವಿರ ಬೆಲೆ ಬಾಳುವ 13.45 ಗ್ರಾಂ ತೂಕದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯ 2 ಪ್ರಕರಣ ಪತ್ತೆಯಾಗಿರುತ್ತದೆ. ಆರೋಪಿತ ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆ, ಬಸವನಗರ ಪೊಲೀಸ್ ಠಾಣೆ ಹಾಗೂ ಇತರೆ ಕಡೆ ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿರುತ್ತದೆ. ಆರೋಪಿತರುಗಳನ್ನು ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.



