ದಾವಣಗೆರೆ: ಅಡಿಕೆ ಪ್ರತಿ ಕ್ವಿಂಟಾಲ್ ಬೆಲೆ 50 ಸಾವಿರ ಗಡಿ ತಲುಪಿದ್ದು, ಬಂಗಾರದ ಬೆಲೆ ಬಂದಿದೆ. ಈ ಕಾರಣಕ್ಕೆ ಅಡಿಕೆ ಕಳ್ಳತನ, ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯಲ್ಲಿ ಅಡಿಕೆ ವ್ಯಾಪಾರಿಯೊಬ್ಬರಿಂದ 1,41 ಕೋಟಿ ಮೌಲ್ಯದ ಅಡಿಕೆ ಖರೀದಿಸಿ, ಬರೋಬ್ಬರಿ 86. 86 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ.
ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಎಂ.ಆರ್.ಕೆ ಟ್ರೇಡರ್ಸ್ ಝಾಕೀರ್ ವಂಚನೆಗೆ ಒಳಗಾದ ವ್ಯಾಪಾರಿಯಾಗಿದ್ದಾರೆ. ನವದೆಹಲಿಯ ವಿವೇಕ್ ಬ್ರದರ್ಸ್‌ನ ಮಯಾಂಕ್ ಶೇಖರ್ ಗುಪ್ತ ಎಂಬಿವವರು ವಂಚನೆ ಮಾಡಿದವರು.ಝಾಕೀರ್ ಶಿವಮೊಗ್ಗದ ಪ್ರಶಾಂತ್ ಎಂಬಾತನಿಗೆ ಮಾರಾಟ ಮಾಡುತ್ತಿದ್ದರು. ಪ್ರಶಾಂತ್ ಖರೀದಿಸಿದ ಅಡಿಕೆಯನ್ನು ದೆಹಲಿಯ ವಿವೇಕ್ ಬ್ರದರ್ಸ್ ಟ್ರೇಡಿಂಗ್ ಕಂಪನಿಗೆ ಮಾರಾಟ ಮಾಡುತ್ತಿದ್ದರು.
ಝಾಕೀರ್ ರೈತರಿಂದ ಖರೀದಿಸಿದ ಅಡಿಕೆಯನ್ನು ನೇರವಾಗಿ ವಿವೇಕ್ ಬ್ರದರ್ಸ್‌ಗೆ ಮಾರಾಟ ಮಾಡಲು ಪ್ರಶಾಂತ್ ಪಡೆದರು. ಅದರಂತೆ ಝಾಕೀರ್, ಕೆ.ಜಿಗೆ 272ರಂತೆ 70 ಕೆಜಿಯ 350 ಚೀಲಗಳಲ್ಲಿ ಅಡಿಕೆಯನ್ನು ವಿವೇಕ್ ಬ್ರದರ್ಸ್ ಮಾಲೀಕ ಮಯಾಂಕ್ ಶೇಖರ್ ಗುಪ್ತ ಅವರಿಗೆ ಕಳುಹಿಸಿದದ್ದರು. ಇದಲ್ಲದೆ, ಮತ್ತೊಂದು ಲೋಡ್ ಬೇಕು ಎಂದು ತಿಳಿಸಿದಾಗ ಅದನ್ನೂ ಕಳುಹಿಸಿಧದರು. ಒಟ್ಟು 1,41ಕೋಟಿ ಮೌಲ್ಯದ ಅಡಿಕೆ ಲೋಡನ್ನು ವಿವೇಕ್ ಬ್ರದರ್ಸ್‌ಪ. ಕಳುಹಿಸಿದ್ದು, ಅದರಲ್ಲಿ 2 ಹಂತಗಲ್ಲಿ 55 ಲಕ್ಷ ಪಾವತಿಸಿದ್ದು, ಉಳಿದ 86.86 ಲಕ್ಷ ಹಣ ಕೇಳಿದ್ದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ ಎಂದು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



