ದಾವಣಗೆರೆ: ಸ್ಮಾಲ್ ಫೈನಾನ್ಸ್ ಕಚೇರಿಯೊಂದರಲ್ಲಿ ಕಳ್ಳತನ ನಡೆದಿದ್ದು, ಘಟನೆ ನಡೆದು 12 ಘಂಟೆಯೊಳಗೆ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕಳ್ಳತನವಾದ 10.88 ಲಕ್ಷ ನಗದು ಹಣ ವಶಕ್ಕೆ ಪಡೆಯಲಾಗಿದೆ.
ನಗರದ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಕಛೇರಿಯಲ್ಲಿ (ಗ್ರಾಮೀಣ ಕೂಟ ಸ್ಮಾಲ್ ಪೈನಾನ್ಸ್) ಕಳ್ಳತನವಾಗಿತ್ತು. ಪ್ರಕರಣ ವರದಿಯಾಗಿ 12 ಘಂಟೆಯೊಳಗೆ ಆರೋಪಿಯನ್ನು ಬಂಧಿಸಿ ಕಳ್ಳತನವಾದ 10,88,440/- ರೂ ನಗದು ಹಣ ವಶಪಡಸಿಕೊಳ್ಳಲಾಗಿದೆ.
ಅವಿನಾಶ ಎಂಬುವವರು ನಗರದ ಶಿವಕುಮಾರಸ್ವಾಮಿ ಬಡಾವಣೆಯಲ್ಲಿರುವ ಕ್ರೆಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ (ಗ್ರಾಮೀಣ ಕೂಟ ಸ್ಮಾಲ್ ಪೈನಾನ್ಸ್) ಕಛೇರಿಯಲ್ಲಿ ಗ್ರೂಪ್ ಲೋನ್ ನೀಡಿದ ಮಹಿಳೆಯರಿಂದ ಸಂಗ್ರಹಿಸಿದ ಲೋನ್ ಹಣದ ಬಾಬ್ತು 10,88,440/- ರೂ ನಗದು ಹಣವನ್ನು ಕಛೇರಿಯ ಸೇಫ್ ಲಾಕರ್‌ನಲ್ಲಿಟ್ಟಿದ್ದು , ಬ್ಯಾಂಕ್‌ಗೆ ಜಮಾ ಮಾಡಲು ಸೇಪ್ ಲಾಕರ್‌ನಲ್ಲಿ ಚೆಕ್ ಮಾಡಿದಾಗ ಹಣವು ಕಳ್ಳತನವಾಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ಆರೋಪಿ ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎನ್ ಸಂತೋಷ, ಮಂಜುನಾಥ ಜಿ ನಿರ್ದೇಶನದಲ್ಲಿ ಹಾಗೂ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಮಲ್ಲೇಶ ದೊಡ್ಡಮನಿ ಮಾರ್ಗದರ್ಶನಲ್ಲಿ ದಾವಣಗೆರೆ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಶಶಿಧರ ಯು ಜೆ, ಪಿಎಸ್‌ಐ ಸಾಗರ್ ಅತ್ತರವಾಲ, ಮಂಜುಳ ರವರ ನೇತೃತ್ವದ ತಂಡವು ಪ್ರಕರಣ ವರದಿಯಾಗಿ 12 ಗಂಟೆಯೊಳಗೆ ಯರವನಾಗತಿಹಳ್ಳಿ ಗ್ರಾಮದ ಆರೋಪಿ ಕಿರಣ ಕುಮಾರ (26) ಬಂಧಿಸಲಾಗಿದೆ. ಪತ್ತೆ ಕಾರ್ಯ ನಡೆಸಿದ ತಂಡಕ್ಕೆ ಪೊಲೀಸ್ ಅಧೀಕ್ಷಕ ಉಮಾ ಪ್ರಶಾಂತ ಪ್ರಶಂಸಿದ್ದಾರೆ.



