ದಾವಣಗೆರೆ: ಹೊಸದುರ್ಗ- ದಾವಣಗೆರೆ ಮಾರ್ಗದ ಮಹಾದೇವ ಖಾಸಗಿ ಬಸ್ ನಲ್ಲಿ ಮದುವೆಗೆ ಬರುವಾಗ ಸುಲ್ತಾನಿಪುರ ಗ್ರಾಮದ ಡಿ.ಕೆ.ಉಷಾ ಅವರ ಬ್ಯಾಗ್ ನಲ್ಲಿದ್ದ 2.26 ಲಕ್ಷ ಮೌಲ್ಯದ ಒಡುವೆ ಕಳ್ಳತನವಾಗಿದೆ.
ಉಷಾ ಅವರು ಶಾಮನುರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಸಂಬಂಧಿಕರ ಮದುವೆಗೆ ಬರುತ್ತಿದ್ದರು. ಬ್ಯಾಗ್ ನಲ್ಲಿ 1.20 ಲಕ್ಷ ಮೌಲ್ಯದ ನೆಕ್ಲೇಸ್, 85 ಸಾವಿರ ಮೌಲ್ಯದ ಕಟ್ ನೆಕ್ಲೇಸ್ 21 ಸಾವಿರದ ಜುಮುಕಿ ಕಳವಾಗಿವೆ. ಈ ಬಗ್ಗೆ ದಾವಣಗೆರೆಯ ಆರ್ ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



