Connect with us

Dvgsuddi Kannada | online news portal | Kannada news online

ದಾವಣಗೆರೆ: ರೂ.20 ಸಾವಿರ ಮೊತ್ತದ ಗಾಂಜಾ ವಶ; ಆರೋಪಿ ಬಂಧನ

crime sym

ದಾವಣಗೆರೆ

ದಾವಣಗೆರೆ: ರೂ.20 ಸಾವಿರ ಮೊತ್ತದ ಗಾಂಜಾ ವಶ; ಆರೋಪಿ ಬಂಧನ

ದಾವಣಗೆರೆ: ಅಬಕಾರಿ ಇಲಾಖೆ ತಂಡ ಹೊನ್ನಾಳಿ ಪಟ್ಟಣದ ಮಾರಿಕೊಪ್ಪ ರಸ್ತೆಯಲ್ಲಿ ಡಿ.19 ರಂದು ದಾಳಿ ನಡೆಸಿ ದ್ವಿಚಕ್ರ ವಾಹನದಲ್ಲಿ ಅನಧಿಕೃತವಾಗಿ ಮಾರಾಟಮಾಡುತ್ತಿದ್ದ ರೂ.20 ಸಾವಿರ ಮೊತ್ತದ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದೆ.

ಹೊನ್ನಾಳಿ ಪಟ್ಟಣದ ಮಾರಿಕೊಪ್ಪ ರಸ್ತೆ ಮತ್ತು ಬಾರ್ ಲೈನ್ ರಸ್ತೆಗಳು ಸಂಪರ್ಕಿಸುವ ವಿದ್ಯುತ್ ಕಂಬದ ತಿರುವಿನ ಬಳಿ ಮೊಹಮದ್ ಸಾದತ್, ಕರೋಂಖಾನ್ ಎಂಬಾತ ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ 145 ಗ್ರಾಂ ಎಲೆ, ಸೊಪ್ಪು, ಹೂವು, ಬೀಜ, ಒಣಗಿದಕಡ್ಡಿ ಮಿಶ್ರಿತವಾದ ಒಣ ಗಾಂಜಾವನ್ನು ಮಾರಾಟ ಮಾಡಲು ಸಾಗಾಣಿಕೆ ಮಾಡುವ ಸಮಯದಲ್ಲಿ ಪತ್ತೆ ಹಚ್ಚಿ ವಾಹನ ಮತ್ತು ಗಾಂಜಾವನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಪ್ರಕರಣದಲ್ಲಿ ಎನ್ ಡಿ ಪಿ ಎಸ್ ಪದಾರ್ಥಗಳ ಅಂದಾಜು ರೂ.20,000 ಮೊತ್ತದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.ಹೊಸಪೇಟೆ ವಿಭಾಗದ ಅಬಕಾರಿ ಜಂಟಿ ಆಯುಕ್ತರ ನಿರ್ದೇಶನದ ಮೇರೆಗೆ, ಅಬಕಾರಿ ಉಪ ಆಯುಕ್ತೆ ಸ್ವಪ್ನ ಆರ್. ಎಸ್ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಅಧೀಕ್ಷಕ ಮುರುಡೇಶ್.ಎಸ್.ಆರ್, ಹಾಗೂ ಇತರರು ದಾಳಿ ನಡೆಸಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top