Connect with us

Dvgsuddi Kannada | online news portal | Kannada news online

ದಾವಣಗೆರೆ: ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿ ಸುಲಿಗೆ; ಆರೋಪಿ ಬಂಧನ- 2.17 ಲಕ್ಷ ನಗದು, ಮೊಬೈಲ್ ವಶ

ದಾವಣಗೆರೆ

ದಾವಣಗೆರೆ: ಒಂಟಿ ಮಹಿಳೆ ಮೇಲೆ ಹಲ್ಲೆ ಮಾಡಿ ಸುಲಿಗೆ; ಆರೋಪಿ ಬಂಧನ- 2.17 ಲಕ್ಷ ನಗದು, ಮೊಬೈಲ್ ವಶ

ದಾವಣಗೆರೆ: ಇತ್ತೀಚೆಗೆ ಒಂಟಿ ಮಹಿಳೆಗೆ ಹಲ್ಲೆ ಮಾಡಿ ಸುಲಿಗೆ ಮಾಡಿದ್ದ ಆರೋಪಿಯನ್ನು‌ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಿಂದ 2,17,500/-ರೂ ನಗದು ಹಣ ಮತ್ತು 26,000/-ರೂ ಬೆಲೆ ಬಾಳುವ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ನಗರದ ಕುಂದುವಾಡ ರಸ್ತೆಯ ಬಾಲಾಜಿ ಸರ್ಕಲ್ ಹತ್ತಿರ ಯೋಗೀಶ್ವರಿ‌ ಎಂಬ ಗೃಹಿಣಿ ವಾಸವಿದ್ದರು. ಪತಿ ಉದ್ಯೋಗ ನಿಮಿತ ಹೊರ ಹೋಗಿದ್ದರು. ಅರವರು ಮಗ ಸಮರ್ಥನೊಂದಿಗೆ ಮನೆಯಲ್ಲಿದ್ದಾಗ ಮಧ್ಯಾಹ್ನ ಸಮಯದಲ್ಲಿ ಮಗನಿಗೆ ತಿನ್ನಲು ತಿಂಡಿಯನ್ನು ಕೊಟ್ಟು ಮನೆಯ ಹೊರಗೆ ಒಣಗಿಸಲು ಇಟ್ಟಿದ್ದ ಕೊಬ್ಬರಿ ತುಂಡುಗಳನ್ನು ನೋಡಲು ಹೋಗಿ ವಾಪಸ್ಸು ಮನೆಗೆ ಬಂದಾಗ ಮನೆಯಲ್ಲಿ ಮಗನೊಂದಿಗೆ ಯಾರೋ ಒಬ್ಬ ವ್ಯಕ್ತಿ ಸ್ಟೋರ್ ರೂಮಿನಲ್ಲಿದ್ದನು. ಯಾರು ನೀನು ಅಂತಾ ಕೇಳಿದ ತಕ್ಷಣವೇ, ಕಲ್ಲಿನಿಂದ ತೆಲೆಗೆ ಜೋರಾಗಿ ಹೊಡೆದು, ಕೊಲ್ಲುವ ಬೆದರಿಕೆ ಹಾಕಿ ಹಣ, ಬಂಗಾರ ಕೊಡುವಂತೆ ಒತ್ತಾಯಿಸಿದ್ದಾನೆ. ಬೆಡ್ ರೂಂಗೆ ಕರೆದುಕೊಂಡು ಹೋಗಿ 3ರಿಂದ 4 ಲಕ್ಷ ಹಣವಿದ್ದ ಬ್ಯಾಗ್ ಅನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಮಹಿಳೆ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆ ಪಡೆದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಈ ಪ್ರಕರಣ ಸಾರ್ವಜನಿಕರಲ್ಲಿ ಭೀತಿಯನ್ನುಂಟು ಮಾಡಿದ್ದು. ಪ್ರಕರಣವನ್ನು ಸವಾಲಾಗಿ ಪರಿಗಣಿಸಿ ಮಾಲು ಮತ್ತು ಆರೋಪಿತರನ್ನು ಪತ್ತೆ ಮಾಡಲು ಪೊಲೀಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಮತ್ತು ದಾವಣಗೆರೆ ನಗರ ಉಪ ವಿಭಾಗದ ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ, ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಭಾವತಿ.ಸಿ.ಶೇತಸನದಿನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಅಧಿಕಾರಿ ಸಿಬ್ಬಂದಿಯನ್ನೊಳಗೊಂಡ ತಂಡವನ್ನು ರಚಿಸಿದ್ದು. ಈ ತಂಡವು ಆರೋಪಿತರಾದ ಮುಬಾರಕ್ ಎಂ @ ಬಾಬು @ ಸಾಹೀಲ್, 22 ವರ್ಷ, ಎಲೆಕ್ಟ್ರಿಷಿಯನ್, ವಾಸ- 5ನೇ ಕ್ರಾಸ್, ತಿರುಮಲ ಬಾರ್ ಹತ್ತಿರ, ಬೂದಾಳ್ ರೋಡ್, ಎಸ್.ಪಿ.ಎಸ್ ನಗರ ದಾವಣಗೆರೆ. ಈತನನ್ನು ಪತ್ತೆ ಮಾಡಿ ಆರೋಪಿತನಿಂದ ಸುಲಿಗೆ ಮಾಡಿದ್ದ 2,17,500 ರೂ. ನಗದು ಹಣ, ಸುಲಗೆ ಮಾಡಿದ್ದ ಹಣದಲ್ಲಿ ತೆಗೆದುಕೊಂಡಿದ್ದ 26 ಸಾವಿರ ರೂ. ಬೆಲೆ ಬಾಳುವ ವಿವೋ ಮೊಬೈಲ್‌ಅನ್ನು ವಶಪಡಿಸಿಕೊಂಡಿದ್ದಾರೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ.

ಆರೋಪಿತನನ್ನು ಪತ್ತೆ ಮಾಡಿದ ತಂಡಕ್ಕೆ ಅಧೀಕ್ಷಕರವರಾದ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ ರವರು ಶ್ಲಾಘಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top