ದಾವಣಗೆರೆ: ದಾವಣಗೆರೆಯಿಂದ ಚಿತ್ರದುರ್ಗಕ್ಕೆ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ 3,99,000 ರೂ. ಬೆಲೆ ಬಾಳುವ 107 ಗ್ರಾಂ ಚಿನ್ನಾಭರಣ ಕಳ್ಳನವಾಗಿರುವ ಘಟನೆ ನಡೆದಿದೆ.
ಬಳ್ಳಾರಿಯ ರಾಘವೇಂದ್ರ ಶೆಟ್ಟಿ ತನ್ನ ಮಗ ನಂದನ್, ಹೆಂಡತಿ ಲಕ್ಷ್ಮೀ ಅವರೊಂದಿಗೆ ಜು28 ರಂದು ದಾವಣಗೆರೆಗೆ ಮಾವನ ಮನೆಗೆ ಆಗಮಿಸಿ ಜು29 ರಂದು ವಾಪಾಸ್ ಬಳ್ಳಾರಿಗೆ ತೆರಳಲು ದಾವಣಗೆರೆ ಬಸ್ ನಿಲ್ದಾಣದಿಂದ ವಾಯುವ್ಯ ಸಾರಿಗೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದರು.
ಬಸ್ ಭರಮಸಾಗರ ತಲುಪುವ ವೇಳೆಗೆ ರಾಘವೇಂದ್ರ ಶೆಟ್ಟಿಗೆ ಅನುಮಾನ ಬಂದು ಬ್ಯಾಗ್ ನಲ್ಲಿದ್ದ ಆಭರಣ ಗಳ ಪೆಟ್ಟಿಗೆ ಪರಿಶೀಲಿಸಿದಾಗ ಕಾಣೆಯಾಗಿತ್ತು. ಆಭರಣಗಳ ಪೆಟ್ಟಿಗೆಯನ್ನು ಯಾರೋ ಕಳ್ಳರು ಅಪಹರಿಸಿದ್ದು, ಕಳ್ಳರನ್ನು ಪತ್ತೆ ಮಾಡಿ, ಒಡವೆಗಳನ್ನು ಹುಡುಕಿಕೊಡುವಂತೆ ರಾಘವೇಂದ್ರ ಶೆಟ್ಟಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



