ದಾವಣಗೆರೆ: ಸಂಸದ ಜಿ.ಎಂ.ಸಿದ್ದೇಶ್ವರ್‌ಗೆ ಅಪರಿಚಿತ ಯುವತಿಯೊಬ್ಬಳು ವಾಟ್ಸಾಪ್ ವಿಡಿಯೋ ಕಾಲ್, ಮೆಸೇಜ್ ಮಾಡಿ, ಅಶ್ಲೀಲವಾಗಿ ವರ್ತಿಸಿದ್ದಲ್ಲದೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬ್ಲಾಕ್ ಮೇಲ್ ಮಾಡಿದ ಘಟನೆ ನಡೆದಿದೆ. ಈ ಬಗ್ಗೆ ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ನಿವಾಸದಲ್ಲಿದ್ದ ಜಿ.ಎಂ.ಸಿದ್ದೇಶ್ವರ್‌ಗೆ ಜು.20ರಂದು ರಾತ್ರಿ 10.16ರ ವೇಳೆ ಸಂಸದ ವೇಳೆ ಕಾಲ್ ಮಾಡಿದ ಯುವತಿ ಹೌ ಆರ್ ಯು ಅಂತಾ ಮೆಸೇಜ್ ಬಂದಿದೆ. ನಂತರ10.20ಕ್ಕೆ ಕಾಲ್ ಬಂದಿದೆ. ಸಂಸದ ಸಿದ್ದೇಶ್ವರ ಯಾರೋ ಕರೆ ಮಾಡಿದ್ದಾರೆಂದು ಪತ್ನಿ ಗಾಯತ್ರಿ ಜೊತೆಗೆ ಹಾಲ್‌ಗೆಬಂದಾಗ ಅಪರಿಚಿತ ಯುವತಿ ವಾಟ್ಸಾಪ್ ವಿಡಿಯೋ ಕಾಲ್ ಮಾಡಿದ್ದಾಳೆ. ಸಂಸದ ಸಿದ್ದೇಶ್ವರರ ಬಳಿ ಹಿಂದಿಯಲ್ಲಿ ಯೋಗಕ್ಷೇಮ ವಿಚಾರಿಸುವ
ನೆಪದಲ್ಲಿ ಅಪರಿಚಿತ ಯುವತಿ ವಿಡಿಯೋ ಕಾಲ್ ಮಾಡಿ, ಅಸಭ್ಯವಾಗಿ ವರ್ತಿಸಿದ್ದಾಳೆ. ಯುವತಿಯ ಇಂತಹ ವರ್ತನೆಯಿಂದ ಸಿಟ್ಟಿಗೆದ್ದ ಸಂಸದ ಸಿದ್ದೇಶ್ವರ, ಪಕ್ಕದಲ್ಲೇ ಇದ್ದ ಗಾಯತ್ರಿ ಸಿದ್ದೇಶ್ವರ ಗದರಿಸಿದ್ದಾರೆ. ನಂತರ
ಮತ್ತೆ ಕರೆ ಮಾಡಿದ ಅಪರಿಚಿತ ಯುವತಿ, ಈ
ವಿಡಿಯೋ ಸೋಷಿಯಲ್ ಮೀಡಿಯಾಗೆ ಹಾಕುವುದಾಗಿ ಬೆದರಿಕೆ ಹಾಕಿ ಬ್ಲಾಕ್ ಮೇಲ್ ಮಾಡಿದ್ದಾಳೆ.
ರಾಜಸ್ಥಾನದಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡ ಯುವತಿ, ವಿಡಿಯೋ ಕಾಲ್‌ನಲ್ಲಿ ಅಶ್ಲೀಲವಾಗಿ ವರ್ತಿಸಿದ್ದಾಳೆ. ತಕ್ಷಣವೇ ಬೆಂಗಳೂರಿನಿಂದ ದಾವಣಗೆರೆ
ಜಿಲ್ಲಾ ಪೊಲೀಸ್ ವರಿಷ್ಠ ಡಾ.ಕೆ.ಅರುಣ್ ಅವರಿಗೆ ಕರೆ ಮಾಡಿ, ಅಪರಿಚಿತ ಯುವತಿ ಕರೆ ಮಾಡಿದ್ದು, ವಾಟ್ಸಾಪ್ ಮೆಸೇಜ್, ವೀಡಿಯೋ ಕಾಲ್ ಮಾಡಿ, ಅಶ್ಲೀಲವಾಗಿವರ್ತಿಸಿ, ಬ್ಲಾಕ್ ಮೇಲ್ ಮಾಡಿದ್ದ ವಿಚಾರ ತಿಳಿಸಿದ್ದಾರೆ. ಕೂಡಲೇ ಆ ನಂಬರ್ ಬ್ಲಾಕ್
ಮಾಡುವಂತೆ ಸಂಸದರಿಗೆ ಸೂಚಿಸಿದ್ದಾರೆ. ದಾವಣಗೆರ ಎಸ್ಪಿ ಡಾ.ಕೆ.ಅರುಣ್ ಸಲಹೆಯಂತೆ ಬೆಂಗಳೂರಿನಲ್ಲಿ ಡಿವೈಎಸ್ಪಿ ಗೀತಾ ಎಂ ಅವರಿಗೆ ಸಂಸದ ಸಿದ್ದೇಶ್ವರ ಕರೆ ಮಾಡಿ, ಘಟನೆ ಬಗ್ಗೆ ವಿವರಿಸಿದ್ದಾರೆ. ನಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.