ದಾವಣಗೆರೆ: ಬೈಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಆರೋಪಿಗಳಿಂದ 1.10 ಲಕ್ಷ ಮೌಲ್ಯದ 10 ಬೈಕ್‌ಗಳನ್ನು ಜಿಲ್ಲಾ ಪೊಲೀಸರು ವಶಪಡಿಸಿಕೊಳ್ಳಲಾಗಿದೆ.
ಬೈಕ್ ಕಳ್ಳತನಕ್ಕೆ ಸಂಬಂಸಿದಂತೆ ದಾವಣಗೆರೆ ಜಿಲ್ಲೆಯ ಬಡಾವಣೆ ಪೊಲೀಸ್ ಠಾಣೆಯಲ್ಲಿ ದಾಖಲಾದ 2 ಪ್ರಕರಣ, ಹರಿಹರ ನಗರ ಪೊಲೀಸ್ ಠಾಣೆಯ 2 ಪ್ರಕರಣ, ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ 1 ಪ್ರಕರಣ, ವಿದ್ಯಾನಗರ ಪೊಲೀಸ್ ಠಾಣೆಯ 1 ಪ್ರಕರಣ, ಆರ್‌ಎಂಸಿ ಪೊಲೀಸ್ ಠಾಣೆ 1ಪ್ರಕರಣ, ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಷಹರಾ ಪೊಲೀಸ್ ಠಾಣೆಯ 2 ಪ್ರಕರಣ, ವಿಜಯನಗರ ಜಿಲ್ಲೆಯ ಅರಿಸೀಕೆರೆ ಪೊಲೀಸ್ ಠಾಣೆ 1 ಪ್ರಕರಣ ದಾಖಲಾಗಿತ್ತು.
ದಾವಣಗೆರೆ ನಗರ ಉಪ-ವಿಭಾಗದ ಡಿವೈಎಸ್ ಪಿ ನರಸಿಂಹ ವಿ ತಾಮ್ರಧ್ವಜ ಮಾರ್ಗದರ್ಶನದಲ್ಲ್ಲಿ ಬಡಾವಣೆ ಪೊಲೀಸ್ ಪೊಲೀಸ್ ನಿರೀಕ್ಷಕ ಸುರೇಶ ಸಗರಿ ನೇತೃತ್ವದಲ್ಲಿ ಪಿ.ಎಸ್.ಐ ಅರವಿಂದ ಬಿ.ಎಸ್ ಮತ್ತು ಪಿಎಸ್‌ಐ ಚಿದಾನಂದಪ್ಪ ಎಸ್.ಬಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ಪತ್ತೆ ಹಚ್ಚಿದೆ. ಎಆರ್‌ಎಸ್‌ಐ ಕುಬೇಂದ್ರಪ್ಪ ಸಿಬ್ಬಂದಿಗಳಾದ ಹರೀಶ್, ಸಿದ್ದೇಶ್, ಅರುಣ ಕುಮಾರ, ಹರೀಶ್ ಕೆ.ಬಿ, ಸೈಯದ್ ಅಲಿ, ಹನುಮಂತಪ್ಪ, ಅರ್ಜನ್ ರಾಯಲ್, ವಿಶಾಲಾಕ್ಷಿ ಬಿ ಪತ್ತೆ ಭಾಗವಹಿಸಿದ್ದರು.