ದಾವಣಗೆರೆ: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಿತ್ತುಕೊಂಡು ಪರಾರಿಯಾದ ಕೆಲವೇ ಗಂಟೆಯಲ್ಲಿ ಕ್ಷಿಪ್ರ ಕಾರ್ಯಚರಣೆ ನಡೆಸಿದ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ ಕಿತ್ತುಕೊಂಡು ಹೋಗಿದ್ದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಿಸಿದ ಸ್ಕೂಟರ್ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಎಮ್ ಸಿಸಿ “ಬಿ” ಬ್ಲಾಕ್
ನಲ್ಲಿ ಮದ್ಯಾಹ್ನ 12.20 ರ ಸುಮಾರು ದಾವಣಗೆರೆ ನಗರದ 2 ನೇ ಮೇನ್ 4 ನೇ ಕ್ರಾಸ್ ಬಳಿ ಮೊಬೈಲ್ ನೋಡುತ್ತಾ
ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಹಿಂಭಾಗದಿಂದ ಯಾರೋ ಒಬ್ಬ ವ್ಯಕ್ತಿ ಸ್ಕೂಟರ್ ನಲ್ಲಿ ಬಂದು, ಕೈಯಲ್ಲಿದ್ದ
ಸ್ಯಾಮ್ ಸಾಂಗ್ ಮೊಬೈಲ್ ಎಮ್ 31 ಅಂದಾಜು ಮೌಲ್ಯ 10,000/- ರೂ ಮೊಬೈಲ್ ನ್ನು ಕಿತ್ತುಕೊಂಡು inವೇಗವಾಗಿ
ಹೋಗಿದ್ದನು. ಈ ಬಗ್ಗೆ ಬಡಾವಣೆ
ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಬಡಾವಣೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಧನಂಜಯ, ತಮ್ಮ ಸಿಬ್ಬಂದಿಗಳ
ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ಮಾಡಿ ಸ್ಥಳದಲ್ಲಿ ಸಿಕ್ಕಾ ಸಿಸಿಟಿವಿ ದೃಶ್ಯವಳಿಗಳ ಆಧಾರದ ಮೇಲೆ ಕೆಲವೇ
ಗಂಟೆಗಳಲ್ಲಿ ಆರೋಪಿತ ನಿಂಗರಾಜ್ ಎ., 23 ವರ್ಷ ಆವರಗೆರೆ ವಾಸಿಯನ್ನು ಬಂಧಿಸಲಾಗಿದೆ.
ಆರೋಪಿ ಕಿತ್ತುಕೊಂಡು ಹೋಗಿದ್ದ
ಮೊಬೈಲ್ ಅಂದಾಜು ಮೌಲ್ಯ 10,000/- ರೂ ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟರ್ ಅಂದಾಜು ಮೌಲ್ಯ 50,000/- ಹಾಗೂ ಕೆಟೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಮೊಬೈಲ್ (ಅಂದಾಜು ಮೌಲ್ಯ20,000/- ರೂ) ನ್ನು ಅಮಾನತ್ತು ಪಡಿಸಿಕೊಂಡು ಆರೋಪಿತನನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.



