ದಾವಣಗೆರೆ: ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ಅಂತರ್ ಜಿಲ್ಲೆಯ ಇಬ್ಬರು ಬೈಕ್ ಕಳ್ಳರ ಬಂಧನ ಮಾಡಲಾಗಿದೆ. 7 ರಾಯಲ್ ಎನ್ ಫೀಲ್ಡ್ ಮತ್ತು 5 ಸ್ಪೆಂಡರ್ ಪ್ಲಸ್ ಬೈಕ್‌ಗಳು ಒಟ್ಟು 12 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು, ಬೈಕ್‌ಗಳ ಅಂದಾಜು ಮೌಲ್ಯ18 ಲಕ್ಷ ರೂ.ಗಳಾಗಿದೆ.
ಆರಿಫ್‌ವುಲ್ಲಾ ತನ್ನ ಹಿರೋ ಬೈಕನ್ನು ಮಿಲ್ಲತ್ ಕಾಲೇಜು ಹತ್ತಿರದ ಬಿಡಿ ಲೇಔಟ್ ಮುಂಭಾಗ ನಿಲ್ಲಿಸಿದ್ದನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದಾರೆಂದು ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆಗೆ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾಮಗೊಂಡ ಬಿ. ಬಸರಗಿ, ದಾವಣಗೆರೆನಗರ ಉಪ ವಿಭಾಗದ ಪೊಲೀಸ್ ಉಪಾಧಿಕ್ಷಕ ಮಲ್ಲೇಶ್ ದೊಡ್ಡಮನಿ ರವರ ಮಾರ್ಗದರ್ಶದನದಲ್ಲಿ ಆಜಾದ್ ನಗರ ಪೊಲೀಸ್ ನಿರೀಕ್ಷಕ ಇಮ್ರಾನ್ ಬೇಗ್ ಆಜಾದ್, ನಗರ ಪೊಲೀಸ್ ಉಪ ನಿರೀಕ್ಷಕ ಕಾಂತರಾಜ್ ಎಸ್ ಮತ್ತು ಶೃತಿ ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡವು ಎಸ್.ಎಸ್.ಎಮ್ ನಗರದ ಈದ್ಗಾ ಮೈದಾನದ ಮುಂಭಾಗದ ಬಳಿ ಮೇಲ್ಕಂಡ ಪ್ರಕರಣದ ಆರೋಪಿತರಾದ 1) ಸೂಫಿಯಾನ್ (20) 2) ಖಾದ್ರಿ ಚೌದರಿ ಯಾನೆ ಜಾವೀದ್ (24) ಎಂಬವರನ್ನು ಬಂಧನ ಮಾಡಿದ್ದು , ಸದರಿ ಆರೋಪಿತರು ಜಿಲ್ಲೆ ಹಾಗೂ ಹೊರ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ಮಾಡಿರುವುದು ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.
ಆರೋಪಿತರಿಂದ ವಿವಿಧ ಠಾಣೆಗೆ ಸಂಬಂದಪಟ್ಟ 07 ರಾಯಲ್ ಎನ್‌ಫೀಲ್ಡ್ ಮತ್ತು 05ಸ್ಪೆಂಡರ್ ಪ್ಲಸ್ ಬೈಕ್‌ಗಳು ಸೇರಿ ಒಟ್ಟು12 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದು, ಸದರಿ ಬೈಕ್‌ಗಳು ಅಂದಾಜು ಮೌಲ್ಯ 18,0000 ರೂ.ಗಳಾಗಿರುತ್ತವೆ. ಈ ಪ್ರಕರಣದ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳನ್ನುಬ ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ.ಅರುಣ ಕೆ. ಶ್ಲಾಘಿಸಿದ್ದಾರೆ.



