ದಾವಣಗೆರೆ: ಚಿತ್ರದುರ್ಗ ಕಡೆಯಿಂದ ಅಕ್ರಮವಾಗಿ ಸಾಗಿಸುತ್ತಿದ್ದ 75,66,793 ರೂ. ಮೌಲ್ಯದ ಮದ್ಯ, 22 ಲಕ್ಷ ರೂ. ಮೌಲ್ಯದ ಲಾರಿಯನ್ನು ಚನ್ನಗಿರಿಯ ರಾಷ್ಟ್ರೀಯ ಹೆದ್ದಾರಿ 13 ಮಾದಾಪುರ ಚೆಕ್ ಪೋಸ್ಟ್ ನಲ್ಲಿ ಅಬಕಾರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಮದ್ಯ ಸಾಗಿಸುತ್ತಿದ್ದ ಲಾರಿ ಚಾಲಕ ಧನ೦ಜಯ, ವಾಹನ ಮಾಲೀಕ ರವಿ ಎ೦ಬುವರ ಬಂಧಿಸಲಾಗಿದೆ.
ಚನ್ನಗಿರಿ ತಾ. ಮಾದಾಪುರ ಚೆಕ್ ಪೋಸ್ಟ್ ಬಳಿ ಚಿತ್ರದುರ್ಗ ಕಡೆಯಿಂದ ಬರುತ್ತಿದ್ದ ಲಾರಿಯಲ್ಲಿ ಮದ್ಯ ಸಾಗಿಸುತ್ತಿದ್ದು, ತಪಾಸಣೆ ನಡೆಸಿದಾಗ ಮೆ.ಪರ್ನಾಡ್ ರಿಕಾರ್ಡ್ ಪ್ರೈವೇಟ್ ಲಿ. ಲೆಸ್ಬಿ ಆಫ್ ಯುನಿವರ್ಸರ್ ಬಾಟರ್ ಪ್ರೈ.ಲಿ., ಮಾರೋಹಳ್ಳಿ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಸುಮಾರು 75,66,793
ರು. ಮೌಲ್ಯದ ಒಟ್ಟು 4835.880 ಲೀಟರ್
ಮದ್ಯವನ್ನು ತುಮಕೂರು, ತಿಪಟೂರು, ಅರಸೀಕೆರೆ ಮಾರ್ಗವಾಗಿ ಕೆಎಸ್‌ಬಿಸಿಎಲ್ ಶಿವಮೊಗ್ಗಕ್ಕೆ ಸಾಗಿಸಬೇಕಿತ್ತು ಎಂಬುದು ಗೊತ್ತಾಗಿದೆ.ಮದ್ಯದ ಬಾಕ್ಸ್‌ಗಳ ಸಮೇತ ಲಾರಿ ಜಪ್ತಿ ಮಾಡಲಾಗಿದೆ.



