ದಾವಣಗೆರೆ: ನಗರದ ಕೆಟಿಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ಮುಂದಿನ ನೀರಿನ ತೊಟ್ಟಿಯಲ್ಲಿ 6 ವರ್ಷದ ಮಗುವೊಂದು ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಮೋಹಿತ್ (6) ಸಾವನ್ನಪ್ಪಿದ ಮಗುವಾಗಿದ್ದು, ಆಟವಾಡಲು ಹೋಗಿ ಮಗು ನೀರಿನ ತೊಟ್ಟಿಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಎಲ್‌ಐಸಿ ಅಧಿಕಾರಿ ಪ್ರಕಾಶ ಎಂಬುವರ ಪುತ್ರ ಮೋಹಿತ್. ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ತೊಟ್ಟಿ ಮುಚ್ಚದೇ ಹಾಗೆ ಬಿಟ್ಟ ಹಿನ್ನೆಲೆ ದುರಂತ ಸಂಭವಿಸಿದೆ ಎಂದು ಆರೋಪಿಸಿದ್ದು, ಕಟ್ಟಡ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕೆಟಿಜೆ ನಗರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.