ದಾವಣಗೆರೆ: ಅಕ್ರಮವಾಗಿ ಪಡಿತರ ಅಕ್ಕಿ, ರಾಗಿ ಸಾಗಾಟ ಮಾಡುತ್ತಿದ್ದ ಆಟೋ ಮೇಲೆ ಆಹಾರ ಮತ್ತು ಕೆಟಿಜೆ ನಗರ ಪೊಲೀಸರು ದಾಳಿ ಮಾಡಿದ್ದಾರೆ. ಈ ದಾಳಿಯಲ್ಲಿ 470 ಕೆ.ಜಿ. ಅಕ್ಕಿ ಹಾಗೂ 70 ಕೆ.ಜಿ.ರಾಗಿ ವಶಪಡಿಸಿಕೊಂಡಿದ್ದಾರೆ. ಸಾರ್ವಜನಿಕ ನ್ಯಾಯ ಬೆಲೆ ಅಂಡಿಯಲ್ಲಿ ಉಚಿತವಾಗಿ ನೀಡಿದ್ದ ಅಕ್ಕಿ, ರಾಗಿಯನ್ನು ಅಕ್ರಮವಾಗಿ ಸಂಗ್ರಹಿಸಿ ಆಟೋದಲ್ಲಿ ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



