ದಾವಣಗೆರೆ: ನಕಲಿ ಬಂಗಾರ ನೀಡಿ ವಂಚನೆ ಪ್ರಕರಣದಲ್ಲಿ ಚನ್ನಗಿರಿ ಮೂಲದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಲಬುರುಗಿ ಮೂಲದ ರಮೇಶ ಎಂಬಾತನಿಗೆ ಚನ್ನಗಿರಿ ಮೂಲದ ಆರೋಪಿ ಪೋನ್ ಮುಖಾಂತರ ಪರಿಚಯ ಮಾಡಿಕೊಂಡು ನಂತರ ಸ್ವಲ್ಪ ದಿನದ ನಂತರ ನಮ್ಮ ಬಳಿ ಹಳೆಯ ಬಂಗಾರದ ಸರದ ಬಿಲ್ಲೆಗಳು ಇವೆ. ನಾವು ಕೊಡುತ್ತೆ ಅಂತಾ ಹೇಳಿ ಮೊದಲು ಎರಡು ಬಂಗಾರದ ನಾಣ್ಯಗಳನ್ನು ನೀಡಿರುತ್ತಾರೆ. ಸ್ವಲ್ಪ ದಿನದ ನಂತರ ಸುಮಾರು 6 ಲಕ್ಷ ಹಣ ತರಲು ತಿಳಿಸಿದ್ದಾನೆ.
ಅನುಮಾನ ಬಂದು ಹಣದ ಬದಲಾಗಿ ಇಟ್ಟಿಗೆ ಹೆಂಡೆಗೆ ಪೇಪರ್ ಸುತ್ತಿಕೊಂಡು ಹೊನ್ನಾಳಿಗೆ ಬಂದಿದ್ದಾರೆ. ರಾಜು ಎಂಬಾತ ಪದೇ ಪದೇ ಪೋನ್ ಮಾಡಿ ಅರಬಟ್ಟೆ ಗ್ರಾಮದ ಹತ್ತಿರ ಕರೆದಿದ್ದಾರೆ. ಆಗ ನಾಲ್ಕು ಜನರು ಎರಡು ಬೈಕಿನಲ್ಲಿ ಬಂದ ಹಣ ಕೇಳಿದ್ದು, ನಕಲಿ ಬಂಗಾರ ನಾಣ್ಯಗಳನ್ನು ನೀಡಿದ್ದಾರೆ. ಹಣ ನೀಡುವಷ್ಟರಲ್ಲಿಯೇ ಯಾವುದೋ ಆಟೋ ಬರುವುದನ್ನು ನೋಡಿ ಓಡಿ ಹೋಗಿದ್ದಾರೆ. ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ವಂಚನೆ ಪ್ರಕರಣದಲ್ಲಿ ಆರೋಪಿತನನ್ನು ಬಂಧಿಸಲು ಹೊನ್ನಾಳಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಿದ್ದೇಗೌಡ ಹೆಚ್ ಎಂ. ನೇತೃತ್ವದ ತಂಡ ಪ್ರಕರಣದ ಪ್ರಮುಖ ಆರೋಪಿ ರಾಜು ಎನ್, (33)ವರ್ಷ, ಕೂಲಿ ಕೆಲಸ, ವಾಸ: ಜೋಳದಾಳು ಗ್ರಾಮ, ಚನ್ನಗಿರಿ ತಾಲ್ಲೂಕು, ದಾವಣಗೆರೆ ಜಿಲ್ಲೆ ಈತನನ್ನು ಬಂಧಿಸಿದ್ದಾರೆ. ಆರೋಪಿತನಿಂದ ಎರಡು ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ರಾಜು ಎನ್ ಹಾಗೂ ಈತನ ಸಂಬಂಧಿ ಚೌಡಪ್ಪ, ಚೇತನ, ಅಭಿ ಸೇರಿಕೊಂಡು ಮೋಸ ಮಾಡುವ ಉದ್ದೇಶದಿಂದ ನಕಲಿ ಬಂಗಾರದ ನಾಣ್ಯಗಳನ್ನು ನೀಡಿ, ಹಣ ಪಡೆಯುವ ಸಲುವಾಗಿ ಈ ಕೃತ್ಯ ಮಾಡಿರುವುದು ತಿಳಿದು ಬಂದಿರುತ್ತದೆ.
ಚನ್ನಗಿರಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಡಾ. ಸಂತೋಷ ಕೆ ಎಂ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕ ಹೆಚ್ ಎಂ. ಸಿದ್ದೆಗೌಡ, ಎಎಸ್‌ಐ ಪ್ರಕಾಶ ಆರ್. ಸಿಬ್ಬಂದಿಗಳಾದ ಜಗದೀಶ ಜಿ ವಿ, ಚೇತನ್ ಕುಮಾರ್ ಎನ್.ಎಸ್, ಹೇಮರಾಜು, ಮಹಮ್ಮದ್ ರಫೀಕ್ ತಂಡದಲ್ಲಿದ್ದರು. ಈ ಕಾರ್ಯಾಚರಣೆಗೆ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್ ಐ.ಪಿ.ಎಸ್ , ಹೆಚ್ಚುವರಿ ಪೊಲೀಸ್ ಅಧೀಕ್ಷಕ. ರಾಮಗೊಂಡ ಬಸರಗಿ ಪ್ರಶಂಸಿದ್ದಾರೆ.



