ದಾವಣಗೆರೆ: ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಮಾಲೀಕತ್ವದ ಕಲ್ಲೇಶ್ವರ ಮಿಲ್ ನ ಫಾರ್ಮಹೌಸ್ ನಲ್ಲಿ ವನ್ಯ ಪ್ರಾಣಿಗಳು ಪತ್ತೆ ಪ್ರಕರಣದಲ್ಲಿ ನಾಲ್ಕನೇ ಆರೋಪಿ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿ ಮೂವರಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಜಾಮೀನು ಮಂಜೂರು ಮಾಡಿದೆ.
ಕಲ್ಲೇಶ್ವರ ರೈಸ್ ಮಿಲ್ ವ್ಯವಸ್ಥಾಪಕ ಸಂಪಣ್ಣ ಮುತಾಲಿಕ್ ಹಾಗೂ ಕರಿಬಸಯ್ಯಗೂ ಸಹ ಕೋರ್ಟ್ ಜಾಮೀನು ನೀಡಿದೆ. ಡಿ.21ರಂದು ನಗರದ ಬಂಬೂ ಬಜಾರ್ ಬಳಿಯ ಕಲ್ಲೇಶ್ವರ ರೈಸ್ ಮಿಲ್ ಫಾರ್ಮ್ ಹೌಸ್ ಮೇಲೆ ಅರಣ್ಯ ಇಲಾಖೆ ಹಾಗೂ ಬೆಂಗಳೂರು ಸಿಸಿಬಿ ಪೊಲೀಸರು ಮಾಡಿದ್ದರು. ಈ ವೇಳೆ 30 ವನ್ಯ ಜೀವಿಗಳು ಪತ್ತೆಯಾಗಿದ್ದವು.
ವನ್ಯ ಜೀವಿ ಪತ್ತೆ ಹಿನ್ನೆಲೆ ಅರಣ್ಯ ಇಲಾಖೆ ಕೇಸ್ ದಾಖಲಿಸಿತ್ತು. ಇದೀಗ ಪ್ರಕರಣ ಸಂಬಂಧ ಮೂವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಎಸ್ ಎಸ್ ಮಲ್ಲಿಕಾರ್ಜುನ ಪರ ಹಿರಿಯ ವಕೀಲ ಪ್ರಕಾಶ ಪಾಟೀಲ್ ಹಾಗೂ ಸಂಪಣ್ಣ ಮತ್ತು ಕರಿಬಸಯ್ಯ ಪರ ವಕೀಲ ರಾಮದಾಸ್ ವಾದ ಮಂಡನೆ ಮಾಡಿದ್ದಾರೆ.



