ದಾವಣಗೆರೆ; ನಗರದ ಜಯದೇವ ಸರ್ಕಲ್ ಬಳಿ ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ನಿವೃತ್ತ ಬಿಎಸ್ ಎಫ್ ಹೆಡ್ ಕಾನ್ ಸ್ಟೆಬಲ್ ಸುಶೀಲ್ ಕುಮಾರ್ ಗೆ ಎಸ್ ಪಿ ರಿಷ್ಯಂತ್ ಸನ್ಮಾನ ಮಾಡಿದ್ದಾರೆ.
ಜಯದೇವ ಸರ್ಕಲ್ ಬಳಿ ಯಾರೋ ಮೂರ್ನಾಲ್ಕು ಯುವಕರು ಒಬ್ಬ ವ್ಯಕ್ತಿಗೆ ಹಲ್ಲೆ ಮಾಡಿ 12 ಸಾವಿರ ಮೌಲ್ಯದ ಮೊಬೈಲ್ ಕಿತ್ತುಕೊಂಡು ಪರಾರಿಯಾಗುತ್ತಿದ್ದರು. ಇದನ್ನು ಕಂಡ ನಿವೃತ್ತ ಬಿಎಸ್ ಎಫ್ ಹೆಡ್ ಕಾನ್ ಸ್ಟೆಬಲ್ ಸುಶೀಲ್ ಕುಮಾರ್ ಹಲ್ಲೆ ಮಾಡಿದ ಸರಸ್ವತಿ ನಗರದ ವಿನಯ್ ಕುಮಾರ್ (20), ದರ್ಶನ್ (21) ಆವರಗೆರೆ ವಾಸಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ 12 ಸಾವಿರ ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ ಆಟೋವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.



