ದಾವಣಗೆರೆ: ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಕಲ್ಲೇಶ್ವರ ಮಿಲ್ ನ ಫಾರ್ಮ್ ಹೌಸ್ ನಲ್ಲಿ ಸಿಕ್ಕ ಜಿಂಕೆ, ಕೃಷ್ಣಮೃಗ ಸೇರಿ 30 ವನ್ಯಜೀವಿಗಳನ್ನು ಅರಣ್ಯ ಇಲಾಖೆ ನ್ಯಾಯಾಲಯದ ನಿರ್ದೇಶನದಂತೆ ರಕ್ಷಣೆ ಮಾಡಿ ಆನಗೋಡು ಮೃಗಾಲಯಕ್ಕೆ ಸ್ಥಳಾಂತರ ಮಾಡಲಾಗಿದೆ.
7 ಜಿಂಕೆ, 11 ಕೃಷ್ಣಮೃಗ, 2 ನರಿ, 7 ಕಾಡುಹಂದಿ ಹಾಗೂ ಮುಂಗುಸಿಗಳನ್ನು ರಕ್ಷಣೆ ಮಾಡಿ ಸ್ಥಳಾಂತರ ಮಾಡಲಾಗಿದೆ. ಡಾ. ಮಂಜುನಾಥ್ ನೇತೃತ್ವದಲ್ಲಿ ವನ್ಯ ಜೀವಿಗಳ ಆರೋಗ್ಯ ಪರಿಶೀಲಿಸಿ ಸ್ಥಳಾಂತರಿಸಲಾಗಿದೆ. ಕೃಷ್ಣಮೃಗ, ಜಿಂಕೆಗಳು ಸೂಕ್ಷ್ಮ ಪ್ರಾಣಿಗಳಾಗಿದ್ದರಿಂದ ಅವುಗಳನ್ನು ಬೊಮಾ ಮಾದರಿಯಲ್ಲಿ ಸ್ಥಳಾಂತರಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.



