ದಾವಣಗೆರೆ: ಕಳ್ಳತನ ಪ್ರಕರಣ ದಾಖಲಾಗಿ ಕೇವಲ ಮೂರು ಗಂಟೆಯಲ್ಲಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ. ಆರೋಪಿಯಿಂದ 2.38 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ ನಗರ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ನರಸಿಂಹ ವಿ. ತಾಮ್ರಧ್ವಜ ಮಾರ್ಗದರ್ಶನದಲ್ಲಿ ಪೊಲೀಸ್ ನಿರೀಕ್ಷಕರಾದ ಧನಂಜಯ ನೇತೃತ್ವದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಾಗಿ ಕೇವಲ 3 ಗಂಟೆಯಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡಲಾಗಿದೆ.
ಪ್ರಕರಣದ ಆರೋಪಿತ ಕಿರಣ್ ನಾಯ್ಕ,23 ವರ್ಷ, ಮಸಾಲೆ ವ್ಯಾಪಾರ, ಹಾಲಿ ವಾಸ 08 ನೇ ಮುಖ್ಯ ರಸ್ತೆ, ಶಾಂತಿ ನಗರ ದಾವಣಗೆರೆ ಈತನನ್ನು ವಶಕ್ಕೆ ಪಡೆದು ಅರೋಪಿತನಾದ ಕಳ್ಳತನವಾದ ಒಟ್ಟು 59 ಗ್ರಾಂ ಅಂದಾಜು ಮೌಲ್ಯ 2,38,000/- ರೂ ಬಂಗಾರದ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ;-11.12.2022 ರಂದು ಮಧ್ಯಾಹ್ನ 02.000ಗಂಟೆ ಸಮ ವೆಂಕಟೇಶ್ ನಾಯ್ಕ ಎಂಬುವರು ನನ್ನ ಅಣ್ಣ ಶೇಕರ್ ನಾಯ್ಕ ನ ಮಗಳು ರೇಷ್ಮಾ ಪಿ.ಎಸ್ ವಿವಾಹವು ಕಾರ್ತಿಕ್ ಜೊತೆ ದಿನಾಂಕ;-11.12.2022 ರಂದು ದಾವಣಗೆರೆ ನಗರದ ನರಹರಿಶೇಟ್ ಕಲ್ಯಾಣ ಮಂಟಪದಲ್ಲಿ ನಿಶ್ಚಯವಾಗಿದ್ದು, ದಿ;-10.12.2022 ರಂದು ರಾತ್ರಿ 07.೦೦ ಗಂಟೆ ಸುಮಾರು ದಾವಣಗೆರೆ ನಗರದ ನರಹರಿಶೇಟ್ ಕಲ್ಯಾಣ ಮಂಟಪದದಲ್ಲಿ ನನ್ನ ಅಣ್ಣನ ಮಗಳ ಮದುವೆಗೆ ಬಂದಿದ್ದು, ಕಲ್ಯಾಣ ಮಂಟಪದ ರೂಮಿನಲ್ಲಿ ಉಳಿದುಕೊಂಡಿದ್ದು, ದಿನಾಂಕ: 11-12-2022 ರಂದು ಮಧ್ಯಾಹ್ನ 12.30 ಸಮಯದಲ್ಲಿ ನನ್ನ ಹೆಂಡತಿ ಬಂದು ವರ ಕಾರ್ತಿಕ್ ಗೆ ಕೊಡಬೇಕಾದ ಬಂಗಾರದ ಆಭರಣಗಳು ನಮ್ಮ ಬ್ಯಾಗ್ ನಲ್ಲಿ ಕಾಣುತ್ತಿಲ್ಲಾ ಅಂತಾ ತಿಳಿಸಿದ್ದು ಕೂಡಲೇ ನಾನು ಹೋಗಿ ಪರಿಶೀಲನೆ ಮಾಡಿ ನೋಡಲಾಗಿ ಬ್ಯಾಗ್ ನಲ್ಲಿದ್ದಬಂಗಾರದ ಕೈ ಚೈನ್ 20 ಗ್ರಾಂ, ಬಂಗಾರದ ಚೈನ್ 20 ಗ್ರಾಂ, ೩) ಬಂಗಾರದ ವಾಲೆ ಮತ್ತು ಜುಮುಕಿ 13 ಗ್ರಾಂ,ಕೈ ಉಂಗುರ 06 ಗ್ರಾಂ ಬಂಗಾರದ ಆಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.
ಈ ಕಾರ್ಯಾಚರಣೆಯನ್ನು ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಬಡಾವಣೆ ಪೊಲೀಸ್ ಠಾಣೆಯ ಪಿಎಸ್‌ಐ ಲತಾ ತಾಳೇಕರ್ ಮತ್ತು ಪಿಎಸ್‌ಐ ಅಶ್ವಥ ಕುಮಾರ್ ಸಿಬ್ಬಂದಿಯವರಾದ ಸಿದ್ದೇಶ್, ಅರುಣ ಕುಮಾರ, ಸೈಯದ್ ಅಲಿ, ಹನುಮಂತಪ್ಪ, ಗೀತಾ ರಾಘವೇಂದ್ರ ರವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ ರಿಷ್ಯಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್. ಬಿ. ಬಸರಗಿ ಶ್ಲಾಘಿಸಿದ್ದಾರೆ.



