ದಾವಣಗೆರೆ: ಸಹೋದರ ಮಗ ಚಂದ್ರು ಸಾವು ಪ್ರಕರಣ ಹಿನ್ನಲೆ ಕಾರು ಇಂದು ವೀಕ್ಷಣೆಗೆ ಬಂದಿದ್ದ ಶಾಸಕ ರೇಣುಕಾಚಾರ್ಯ , ವೀಕ್ಷಣೆಗೆ ಅವಕಾಶ ನೀಡದ ಪೊಲೀಸರ ವಿರುದ್ಧ ಕಿಡಿಕಾರಿದ್ದಾರೆ. ಹೊನ್ನಾಳಿ ಪೊಲೀಸ್ ಠಾಣೆಯ ಸಿಪಿಐ ಸಿದ್ದನಗೌಡ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ತುಂಗಾ ಕಾಲುವೆಯಲ್ಲಿ ಚಂದ್ರು ಮೃತದೇಹ ಪತ್ತೆಯಾದ ಕಾರನ್ನು ಈಗಾಗಲೇ ಪೋಲಿಸರು ವಶಕ್ಕೆ ಪಡೆದ್ದಾರೆ. ಇವತ್ತು ತಮ್ಮ ಮಗನ ಕಾರನ್ನು ವೀಕ್ಷಿಸಲು ಬಂದಿದ್ದ ರೇಣುಕಾಚಾರ್ಯಗೆ ಕಾರು ತೋರಿಸುವಂತೆ ಪೊಲೀಸರಿಗೆ ಒತ್ತಾಯಿಸಿದ್ದಾರೆ. ಕಾರು ತೋರಿಸದಿದ್ದಕ್ಕೆ ಪೊಲೀಸರ ವಿರುದ್ಧ ವಾಗ್ದಾಳಿ ನಡೆಸಿದರು. ಸಿಪಿಐ ಸಿದ್ದನಗೌಡರವರು ಪ್ರಕರಣ ತನಿಖೆ ಹಂತದಲ್ಲಿದ್ದರಿಂದ ಕಾರನ್ನು ತೋರಿಸಲು ಆಗುವುದಿಲ್ಲ ಎಂದರು.
ಇದಕ್ಕೆ ಸಿಟ್ಟಿಗೆದ್ದ ಶಾಸಕ ಎಂಪಿ ರೇಷುಕಾಚಾರ್ಯ, ಮಾಧ್ಯಮಕ್ಕೆ ಓವರ್ ಸ್ಪೀಡ್ ಎಂದು ಹೇಳಿಕೆ ಕೊಟ್ಟು ಹೋದ, ಅಲೋಕ್ ಕುಮಾರ್ ಯಾರ್ರೀ..? ಅವರು ಕಾರು ಓವರ್ ಸ್ಪೀಡ್ ಇತ್ತು ಎಂದು ಹೆಂಗ್ ಹೇಳಿದ್ರು? ಈ ಪ್ರಕಣದ ಬಗ್ಗೆ ನನ್ನ ಬಳಿ ಚರ್ಚೆ ಮಾಡಿದ್ರಾ?. ಪ್ರಾಥಮಿಕ ತನಿಖೆ ನನ್ನಿಂದ ಆರಂಭವಾಗಬೇಕು. ನೀವು ತನಿಖೆ ಬಗ್ಗೆ ಸಿಎಂಗೆ ಲಕೋಟೆ ಮೂಲಕ ಮಾಹಿತಿ ನೀಡ್ಬೇಕಾಗಿತ್ತು. ಓವರ್ ಸ್ಪೀಡ್ ಎಂದು ಹೇಳಿದ್ರೆ ಮಗನಿಗೆ ನ್ಯಾಯ ಕೊಡಿಸಲು ಸಾಧ್ಯನಾ…? ತನಿಖೆ ಮಾಡದೇ ವರದಿ ಕೊಟ್ಬು ಬಿಟ್ಟರೇ ಹೇಗೆ..? ವರದಿಯನ್ನು ಗೃಹ ಸಚಿವರಿಗೆ ಕೊಡ್ಬೀಕಿತ್ತು ಆಕ್ರೋಶ ವ್ಯಕ್ತಪಡಿಸಿದರು.
ನನ್ನ ರಕ್ಷಣೆಗೆ ಯಾರು ಬೇಕಾಗಿಲ್ಲ. ನನ್ನ ರಕ್ಷಣೆಗೆ ನನ್ನ ಜನ ಇದ್ದಾರೆ. ಕಾರ್ ತೋರಿಸುತ್ತೀರಾ ಇಲ್ವಾ..? ನಾನು ಒಳ್ಳೆ ಮಾತಿಂದ ಹೇಳುತ್ತಿದ್ದೇನೆ. ನನ್ನ ಕೆಣಕಬೇಡಿ…ಯಾವ ಎಫ್ಎಸ್ಎಲ್ ಟೀಂ ರೀ, ನಾನು ನನ್ನ ಮಗನನ್ನು ಕಳಿಸುವ ತನಕ ಸುಮ್ಮನಿದ್ದೇ. ಜನರಿಗೆ ನಾನು ಉತ್ತರ ಕೊಡಲಾಗುತ್ತಿಲ್ಲ. ನೀವು ಅಲ್ಲ ನನ್ನ ಮಗನ ಹುಡುಕಿದ್ದು, ನಮ್ಮ ಜನ ಹುಡುಕಿದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊನ್ನಾಳಿ ಪೋಲಿಸ್ ಠಾಣೆಯ ಸಿಪಿಐ ಸಿದ್ದನಗೌಡ , ಸರ್ ಎಫ್ಎಸ್ಎಲ್ ಟೀಂ ಈ ಕಾರನ್ನು ಪರಿಶೀಲನೆ ನಡೆಸಿ ಸೀಜ್ ಮಾಡಿದ್ದಾರೆ. ಕಾರು ತೋರಿಸಲು ಆಗುವುದಿಲ್ಲ ಎಂದರು.



