ದಾವಣಗೆರೆ: ರಾತ್ರಿ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿದ್ದ 150 ಗ್ರಾಂ ಚಿನ್ನ, 1 ಲಕ್ಷ ನಗದು ಕಳ್ಳತನ ಮಾಡಿ ಪರಾರಿಯಾದ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಕುಂಬಾರ ಬೀದಿ ಮನೆಯೊಂದರಲ್ಲಿ ನಡೆದಿದೆ.
ರಾತ್ರಿ ಎಲ್ಲರೂ ಮಲಗಿದ್ದ ಸಮಯದಲ್ಲಿ ಮನೆಗೆ ನುಗ್ಗುದ ಖದೀಮರು, ಖಾರ ಮಂಡಕ್ಕಿ ವ್ಯಾಪಾರಿ ಸಂತೋಷ ಎಂಬರ ಮನೆಯ ಬೀರುವಿನಲ್ಲಿದ್ದ 150 ಗ್ರಾಂ ಚಿನ್ನ, 1 ಲಕ್ಷ ನಗದು ಕಳ್ಳತನ ಮಾಡಿದ್ದಾರೆ. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



