ದಾವಣಗೆರೆ: ಶಾಸಕ ರೇಣುಕಾಚಾರ್ಯ ಸಹೋದರ ಪುತ್ರ ಚಂದ್ರುಶೇಖರ್ ಸಾವು ಪ್ರಕರಣ ತನಿಖೆ ಹಂತದಲ್ಲಿದೆ. ಬಹಿರಂಗವಾಗಿ ಏನೂ ಹೇಳೋದಿಲ್ಲ. ಮರಣೋತ್ತರ ಪರೀಕ್ಷೆ ವರದಿಯನ್ನು ಆದಷ್ಟು ಬೇಗ ಕೊಡುವಂತೆ ಕೇಳಿದ್ದೇವೆ. ನಾವು ಎವಿಡೆನ್ಸ್ ಸಂಗ್ರಹಿಸುತ್ತಿದ್ದೇವೆ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಎಡಿಜಿಪಿ ಅಲೋಕ್ ಕುಮಾರ್ ಹೇಳಿದರು.
ಚಂದ್ರಶೇಖರ್ರ ತಂದೆ ದೂರು ಕೊಟ್ಟಿದ್ದಾರೆ. ದಾವಣಗೆರೆ ಎಸ್ಪಿ ರಿಷ್ಯಂತ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಸ್ಥಳಕ್ಕೆ ಹುಬ್ಬಳ್ಳಿ ಮತ್ತು ದಾವಣಗೆರೆಯ ಎಫ್ಎಸ್ಎಲ್ ತಂಡ ಭೇಟಿ ನೀಡಿ ಫಿಸಿಕಲ್ ಎವಿಡೆನ್ಸ್ ಸಂಗ್ರಹಿಸುತ್ತಿದ್ದೇವೆ ಎಂದರು.
ಕಾರಿನ ವೀಡಿಯೋ ನ್ಯಾಮತಿ ಪೆಟ್ರೋಲ್ ಬಂಕ್ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ,ಈ ವಿಡಿಯೋ ಪ್ರಕಾರ ಕಾರು 100 ಕಿಲೋ ಮೀಟರ್ ವೇಗದಲ್ಲಿ ಚಾಲನೆಯಲ್ಲಿತ್ತು ಎಂಬುದು ದೃಢವಾಗಿದೆ. ಭಾನುವಾರ(ಅ.30) ರಾತ್ರಿ 11.58ಕ್ಕೆ ಪೆಟ್ರೋಲ್ ಬಂಕ್ ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ರಾತ್ರಿ 12.06ಕ್ಕೆ ಚಂದ್ರಶೇಖರ್ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಮೃತದೇಹ ಸಿಕ್ಕ ಜಾಗಕ್ಕೂ ನ್ಯಾಮತಿಗೂ 10 ಕಿಲೋ ಮೀಟರ್ ದೂರವಿದೆ. ಫೋನ್ ಕಾಲ್ , ಸಿಡಿಆರ್ ಎಲ್ಲವೂ ತನಿಖೆ ಗುತ್ತಿದೆ. ನಿನ್ನೆ ರಾತ್ರಿ ಮರಣೋತ್ತರ ಪರೀಕ್ಷೆ ಆಗಿದೆ. ಎರಡ್ಮೂರು ದಿನದಲ್ಲಿ ವರದಿ ಸಿಗಲಿದೆ ಎಂದರು.



